ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕನಸಲೂ ನೀನೇ ಮನಸಲೂ ನೀನೇ

ಕನಸಲೂ ನೀನೇ ಮನಸಲೂ ನೀನೇ
ನನ್ನಾಣೆ ನಿನ್ನಾಣೆ
ಒಲಿದ ನಿನ್ನ ಬಿಡೆನು ಚೆನ್ನ
ಇನ್ನು  ಎಂದೆಂದಿಗೂ ನಿನ್ನನೆಂದೆಂದಿಗೂ

ಮೌನವು ಚೆನ್ನ ಮಾತಲು ಚೆನ್ನ
ನಗುವಾಗ ನೀನಿನ್ನು ಚೆನ್ನ
ನೋಡಲು ಚೆನ್ನ ಹಾಡಲು ಚೆನ್ನ
ನಿನಗಿಂತ ಯಾರಿಲ್ಲ ಚೆನ್ನ.
ಸ್ನೇಹಕೆ ಸೋತೆ ಮೋಹಕೆ ಸೋತೆ
ಕಂಡಂದೆ ನಾ ಸೊತು ಹೊದೆ
ಮಾತಿಗೆ ಸೋತೆ ಪ್ರೀತಿಗೆ ಸೋತೆ
ಸೋಲಲ್ಲು ಗೆಲುವನ್ನೆ ಕಂಡೆ
ಸೋಲಲ್ಲು ಗೆಲುವನ್ನೆ ಕಂಡೆ
ಕನಸಲೂ ನೀನೇ ಮನಸಲೂ ನೀನೇ
ನನ್ನಾಣೆ ನಿನ್ನಾಣೆ
ನನ್ನಾಣೆ,  ನಿನ್ನಾಣೆ.

ದೇವರೆ ಬಂದು ಬೇಡಿಕೊ ಎಂದು
ಕಣ್ ಮುಂದೆ ನಿಂತಾಗ ನಾನು
ಬೇಡೆನು ಏನೂ, ನೀನಿರುವಾಗ
ಹೊಸ ಆಸೆ ನನಗೇಕೆ ಇನ್ನು.
ಸೂರ್ಯನ ಆಣೆ ಚಂದ್ರನ ಆಣೆ
ಎದೆಯಲ್ಲಿ ನೀನಿಂತೆ ಜಾಣೆ
ಪ್ರಾಣವು ನೀನೆ ದೇಹವು ನಾನೆ
ಈ ತಾಯಿ ಕಾವೇರಿ ಆಣೆ
ಈ ತಾಯಿ ಕಾವೇರಿ ಆಣೆ
ಕನಸಲೂ ನೀನೇ ಮನಸಲೂ ನೀನೇ
ನನ್ನಾಣೆ ನಿನ್ನಾಣೆ
ಒಲಿದ ನಿನ್ನ ಬಿಡೆನು ಚೆನ್ನ
ಇನ್ನು  ಎಂದೆಂದಿಗೂ ನಿನ್ನನೆಂದೆಂದಿಗೂ

ಚಿತ್ರ: ಬಯಲುದಾರಿ 
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ
Tag: Kanasalu neene manasalu neene, kanasaloo neene manasaloo neene


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ