ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೂರು ಕಣ್ಣು ಸಾಲದು

ನೂರು ಕಣ್ಣು ಸಾಲದು,
ನೂರು ಕಣ್ಣು ಸಾಲದು ನಿನ್ನ ನೋಡಲು
ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು
ನೂರು ಕಣ್ಣು ಸಾಲದು.

ಯಾರ ಕನಸ ಕನ್ಯೆಯೋ ಶೃಂಗಾರ ಕಾವ್ಯವೋ
ಈ ಹೊಳೆವ ಕಣ್ಣ ನೋಟ 
ಮುಂಗುರುಳ ತೂಗುವಾಟ 
ಈ ಚೆಲುವ ಮೈಯ ಮಾಟ
ಬಂಗಾರದ ಸಿಂಗಾರಿ ಕಂಡು ಮೂಕನಾದೆನು

ಜನುಮ ಜನುಮದಲ್ಲೂ ನೀ  ನನ್ನವಳೇನೇ,
ನೂರು ವರುಷವಾಗಲಿ ಮರೆಯಲಾರೆನು
ಎಂದೆಂದು ನಿನ್ನ ಅಗಲಿ ನಾ ದೂರ ಹೋಗೆನು
ನೂರು ವರುಷವಾಗಲಿ.

ಜನುಮ ಜನುಮದಲ್ಲೂ ನೀ ನನ್ನವಳೇನೇ
ಈ ನೋವ ತಿಳಿಯಲಾರೆ
ನೀನನ್ನ ಅರಿಯಲಾರೆ
ನೀನಿರದೆ ಬಾಳಲಾರೆ
ನಾನೆಲ್ಲಿರಲಿ ನೀನೆ ನನ್ನ ಜೀವದ ಜೀವ
ನೂರು ವರುಷವಾಗಲಿ ಮರೆಯಲಾರೆನು
ಎಂದೆಂದು ನಿನ್ನ ಅಗಲಿ ನಾ  ಬೇರೆ ಹೊಗೆನೂ
ನೂರು ವರುಷವಾಗಲಿ.

ಚಿತ್ರ: ರಾಜಾ ನನ್ನ ರಾಜಾ
ರಚನೆ: ಚಿ. ಉದಯಶಂಕರ
ಗಾಯನ: ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಪಿ ಬಿ ಶ್ರೀನಿವಾಸ್

Tag: Nooru kannu saaladu, nuru kannu saladu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ