ಋಗ್ವೇದದಲ್ಲಿ ನಮ್ಮ ಪ್ರಾರ್ಥನೆ
ಋಗ್ವೇದದಲ್ಲಿ ನಮ್ಮ ಪ್ರಾರ್ಥನೆ
ಸಂಗಚ್ಛದ್ವಂ ಸಂವದಧ್ವ೦ ಸಂವೋ ಮನಾಂಸಿ ಜಾನತಾಂ|
ಸಮಾನೋಮಂತ್ರಃ ಸಮಿತಃ ಸಮಾನೀ ಸಮಾನಂ ಸಹ ಚಿತ್ತಂ ಏಷಾಂ|
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿವಃ|
ಸಮಾನಂ ಅಸ್ತು ವೋ ಮನಃ ಯಥಾ ವಃ ಸುಸಹಾಸತಿ||
(ಋಗ್ವೇದ)
ನೀವು ಕೂಡಿ ನಡೆಯಿರಿ. ಕೂಡಿ ಬಾಳಿರಿ. ಮಾತಿನಲ್ಲಿ ಏಕತೆಯಿರಲಿ.
ಒಬ್ಬರನ್ನೊಬ್ಬರ ಮನಸ್ಸನ್ನು ಅರಿತುಕೊಳ್ಳಿರಿ.
ಪ್ರಾರ್ಥನಾ ಮಂತ್ರವು ಸಮಾನವಿರಲಿ. ಕಾರ್ಯ ನಿರ್ವಹಣದ ಸಮಿತಿ ನಿರ್ಣಯ
ಸಮಾನವಿರಲಿ. ಮನಸ್ಸು ಹಾಗೂ ಸಂಕಲ್ಪ ಶಕ್ತಿಯ ಚಿತ್ತವು ಸಮಾನವಿರಲಿ.
ನಿಮ್ಮ ಉದ್ದೇಶ ಸಮಾನವಿರಲಿ. ಹೃದಯ ಭಾವನೆ ಸಮಾನವಿರಲಿ. ಯಾವ
ಬಗೆಯಿಂದ ನಿಮ್ಮಲ್ಲಿ ಕೂಡಿ ಇರುವ ಭಾವವು ಬೆಳೆಯುವುದೋ ಆ ಬಗೆಯಲ್ಲಿ ನಿಮ್ಮ ನಡೆ-ನುಡಿ ಇರಲಿ.
Tag: Sangacchadvam samvadadvam
ಕಾಮೆಂಟ್‌ಗಳು