ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೂ ಕೂ ಎನುತಿದೆ ಬೆಳವಾ-ಬಂದು

ಕೂ ಕೂ ಎನುತಿದೆ ಬೆಳವಾ-ಬಂದು
ಹೊಕ್ಕಿತು ಭವವೆಂಬ ದುಖಃದ ಹಳುವ

ಪುರುಷನ ಬುಟ್ಟೀಲಿ ಇಟ್ಟು- ಬಹು
ಹರುಷದಿ ಹಳ್ಳದೂಳ್ ತೇಲಾಕ ಬಿಟ್ಟು
ಮನವೆಂಬ ಗೂಡಿನೊಳಿಟ್ಟು- ತನ್ನ
ತನುವೆಂಬ ಮರದೊಳು ಹಾರಾಕ ಬಿಟ್ಟು

ಆನಂದದೊಳು ತಾನಿರಲು
ಸ್ವಾನಂದದಿ ರೆಕ್ಕೆಯ ಕೆದರುತಲಿರಲು,
ಭುವನದೊಳಗೆ ನಿಂತಿರಲು - ದೇವ
ಶಿಶುನಾಳಾಧೀಶ ಗೋವಿಂದನ ವರವು.

ಸಾಹಿತ್ಯ: ಶಿಶುನಾಳ ಷರೀಫ್ ಸಾಹೇಬರು
ಸಂಗೀತ: ಸಿ. ಅಶ್ವಥ್
ಗಾಯನ: ಬಿ. ಆರ್. ಛಾಯಾ


Tag: Koo Koo enutide belava

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ