ನಾಲ್ಕು ವರ್ಷದ ಕಾಲ
ನಾಲ್ಕು ವರ್ಷದ ಕಾಲ
ನಾಲ್ಕು ವರ್ಷದ ಕಾಲ ನಕ್ಕು ನಲಿದೆವು ನಾವು
ಕೂಡಿ ಕಲಿತೆವು ಒಡನೆ ಕುಣಿದಾಡುತಾ
ಕಂಡ ಕನಸುಗಳೆಷ್ಟೋ ಆಡಿದಾಟಗಳೆಷ್ಟೋ
ಕೊನೆ ಉಂಟೆ ಮೊದಲುಂಟೆ ಕನಸೆ ಜೀವ
ಉಗಿಯ ನಿಲ್ದಾಣದಲಿ ಜನಜಂಗುಳಿಯು ನೆರೆಯೆ
ಕ್ಷಣಗಳೆರಡುರುಳೆ
ಹಾದಿ ಹಿಡಿದೂ ನಾವು ಸಾಗಿದಂತೆ ಬಾಳು
ಮತ್ತೆ ಕೂಡುವೆವೆಂಬ ಬಯಕೆ ಬರಡು
ಕಾಲ ಸಾಗುವುದೆಂಬ ಭ್ರಾಂತಿ ಬಡಿದೆದ್ದಾಗ
ಭೀತಿಯಲಿ ಅಪ್ಪಿದೆವು ಬಯಕೆಗಳನು
ಕಾಲ ಸಾಗುವುದುಂಟೆ ಸಾಗುವುದು ನಾವಂತೆ
ಕಾಲ ಉಳಿಯುವುದಿಲ್ಲೆ, ನರರೆ ಚರರು.
ಸಾಹಿತ್ಯ: ಎಸ್. ಅನಂತನಾರಾಯಣ
(ಈ ಗೀತೆ ನನಗಿಷ್ಟವಾದದ್ದು ಎಂದು ತಮ್ಮ ಮುಂದಿಡುತ್ತಿದ್ದೇನೆ. ನನ್ನ ಯುವ ವಯಸ್ಸಿನಲ್ಲಿ ಆಗಾಗ ಕಿವಿಗೆ ಕೇಳುತ್ತಿತ್ತು. ಹಲವು ದಶಕಗಳಿಂದ ಈ ಗೀತೆಯನ್ನು ಕೇಳಿಲ್ಲ. ಇಲ್ಲಿ ಕೇವಲ ನನ್ನ ನೆನಪಿನಾಳವನ್ನು ಆಶ್ರಯಿಸಿರುವುದರಿಂದ ತಪ್ಪುಗಳಿಗೆ ಆಸ್ಪದವಿದೆ. ತಮಗೆ ಎಲ್ಲಾದರೂ ತಪ್ಪು ಕಂಡಿದ್ದಲ್ಲಿ ತಿದ್ದಬೇಕಾಗಿ ಕೋರಿಕೆ)
Tag: Ninnedege baruvaga
ಕಾಮೆಂಟ್‌ಗಳು