ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಿನ್ನೆಡೆಗೆ ಬರುವಾಗ



ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? 
ಸಡಗರದ ಮಾತುಗಳ ಬಿಂಕವೇಕೆ?
ನಿನ್ನ ಮುಂದಿರುವಾಗ ಮಂತ್ರಗಳ ಮರೆಯೇಕೆ? 
ಸಂಪ್ರದಾಯದ ಮರುಳು ಲಜ್ಜೆಯೇಕೆ?

ನೇಹುರದ ಗೆಜ್ಜೆಗಳ ಕಿಂಕಿಣಿಯ ದನಿ ನಿನ್ನ 
ಸವಿಗೊರಳಿನಿಂಚರವ ಕೆಡಿಸದಿರಲಿ
ಮಂತ್ರಗಳ ಜವನಿಕೆಯು ದೊರೆ ನಿನ್ನ ಸಿರಿಮೈಯ 
ಸೌಂದರ್ಯವನು ಮಬ್ಬುಗಯ್ಯದಿರಲಿ

ನಗ್ನತೆಗೆ ನಾಚದೆಲೆ ಸಿರಿತಳಿರ ತೆಕ್ಕೆಯಿಂ 
ಮೂಡಿಸುಗ್ಗಿಯನೊಲಿವ ಹೂವಿನಂತೆ
ಸಿಂಗರದ ಹೊರೆಯುಳಿದು ಮಂತ್ರಗಳ ಮರೆಯುಳಿದು 
ಪ್ರೇಮದಾರತಿ ಹಿಡಿದು ತೇಲಿ ಬರುವೆ

ಸಾಹಿತ್ಯ: ಕುವೆಂಪು

Tag: Ninnedege baruvaga, Ninnedege baruvaaga

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ