ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಕೃತಿಯೇ ಗುರು ಗಗನ ಲಿಂಗವು

\

ಪ್ರಕೃತಿಯೇ ಗುರು ಗಗನ ಲಿಂಗವು
ಜಗವೆ ಕೂಡಲ ಸಂಗಮ
ಹುಡಿಯೆ ಭಸ್ಮವು ಹುಲ್ಲೆ ಪತ್ರಿಯು
ಜಡವಿದೆಲ್ಲವು ಜಂಗಮ

ಕುಡಿವ ನೀರೆ ತೀರ್ಥ ತಿನ್ನುವ
ರೊಟ್ಟಿ ಶಿವನ ಪ್ರಸಾದವು
ಶ್ರಮದ ಬೆಮರೇ ಸ್ನಾನ ದುಡಿತದ
ಹಾಡೆ ಮಂತ್ರನಿನಾದವು

ಕವಿ : ಕಾವ್ಯಾನಂದ

ಅರ್ಥ :

ಪತ್ರಿ - ಅಂಬು, ಬಾಣಬೆಮರು-ಬೆವರು
ನಿನಾದ - ನಾದ

Tag: Prakrutiye guru gagana linagavu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ