ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಿಲೆಗಳು ಸಂಗೀತವಾ ಹಾಡಿವೆ

ಶಿಲೆಗಳು ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ
ಅನು ದಿನ ಅನು ಕ್ಷಣ ಕುಣಿಯುತಲೀ
ಶಿಲೆಗಳು ಸಂಗೀತವಾ ಹಾಡಿವೆ

ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ
ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಆ ಶಿಲ್ಪಿಯಾ ಹೊಂಗನಸಿನಾ
ಸೌಂದರ್ಯದಾ ಕನ್ನಿಕೆಯರೂ
ಕರವಾ ಮುಗಿದೂ ಶರಣೂ ಎಂದೂ
ಭಕುತಿಯಲೀ ಶ್ರೀಹರಿಯಾ ಸ್ತುತಿಸುತ
ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ
ಅನು ದಿನ ಅನು ಕ್ಷಣ ಕುಣಿಯುತಲೀ
ಶಿಲೆಗಳು ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ, ಶಿಲೆಗಳು ಸಂಗೀತವಾ,
ಶಿಲೆಗಳು ಸಂಗೀತವಾ...

ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ
ಅನು ದಿನ ಅನು ಕ್ಷಣ ಕುಣಿಯುತಲೀ.....
ಶಿಲೆಗಳು ಸಂಗೀತವಾ ಹಾಡಿವೆ
ಶಿಲೆಯಲೆ ಕಲೆಯನ್ನು ಸೆರೆಹಿಡಿದಾ ...
ಕಲೆಯನು ಶಿಲೆಯಲ್ಲೇ ಅರಳಿಸಿದಾ
ಉಳಿಯಿಂದ ಮೀಟಿ ಹೊಸ ನಾದ ತಂದು
ಹೊಸ ರೂಪ ತಂದ ಕಲೆಗಾರನ..
ಯಾವ ರೀತಿ ಈಗ ನಾನು ಹಾಡಿ
ಹೊಗಳುದುವೋ  ಕುಣಿಯುವುದೋ ಎನ್ನುತ
ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ
ಅನು ದಿನ ಅನು ಕ್ಷಣ ಕುಣಿಯುತಲೀ.....

ಸಾಹಿತ್ಯ: ಚಿ. ಉದಯಶಂಕರ
ಸಂಗೀತ: ಉಪೇಂದ್ರ ಕುಮಾರ್
ಗಾಯನ: ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಎಸ್. ಜಾನಕಿ

ಚಲನಚಿತ್ರದಲ್ಲಿ ಈ ಗೀತೆಯನ್ನು ಇಲ್ಲಿ ಕೇಳಿ 

Tag: Shilegalu sangeetava haadive

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ