ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮುಡಿಪು

ಮುಡಿಪು

ನಾ ನಿನ್ನ ಚರಣಗಳ ಮುತ್ತಿಡುವೆ ಹೂವಾಗಿ
ಈ ಜೀವ ಕುಸುಮವನು ಸ್ವೀಕರಿಸು ಪ್ರೇಮದಲಿ
ಹಗಲಿರುಳು ಹಂಬಲಿಸಿ ತಪಗೈದು ನಿನಗಾಗಿ
ಅರಳಿಹೆನು ಹೃದಯದಲಿ ಒಲವಿನಮೃತವ ತುಂಬಿ
ಎನ್ನೆಲ್ಲ ಬಯಕೆಗಳು ನಿನ್ನಲ್ಲೆ ನೆಲೆಸಿಹುದು
ಸ್ವೀಕರಿಸು ಕೃಪೆದೋರಿ ಮಧುರತೆಯ ಸೇವೆಯನು.

ಬಿರುಬಿಸಿಲ ಬೇಗೆಯಲಿ ನೊಂದಿಹೆನು ಬೆಂದಿಹೆನು
ಚಳಿಗಾಳಿ ಮಳೆಗಳಲಿ ನಡುಗಿಹೆನು ಮುದುಡಿಹೆನು
ಬಗೆಬಗೆಯ ಬಿರುನೋಟವೆದುರಿಸುತ ನಿಂದಿಹೆನು
ನಿನ್ನ ಸಿರಿಯಡಿಗಳಿಗೆ ಮುಡಿಪಿಹೆನು ನಾನು.

ಜಗದ ಹೊಗಳಿಕೆಗಳಿಗೆ ಬಾಯ್ಬಿಡುವ ಮರುಳಿಲ್ಲ
ಅವರಿವರ ಮುಡಿಯೇರಿ ಮೆರೆಯುವಾಸೆಗಳಿಲ್ಲ
ಅಂದ ಚೆಂದ ಹೆಮ್ಮೆ ಒಂದಿನಿತು ಎನಗಿಲ್ಲ
ನಿನ್ನಡಿಯ ಧೂಳಿನಲಿ ನಾನೊಂದು ಧೂಳಿ ಕಣಾ

ಸಾಹಿತ್ಯ: ಎಚ್. ಆರ್. ಲೀಲಾವತಿ


Tag: Mudiupu, Na ninna charanagala muttiduve huvagi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ