ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನಾ ಸಂಜೀವನಾ ಜೀವನ ಸಂಜೀವನ
ನೀನುಳಿಯೆ ನಾನು ನೀರುಳಿದ ಮೀನು
ನೀನೇ ಜೀವನಾ, ಜೀವನ ಸಂಜೀವನ
ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನಾ ಸಂಜೀವನಾ ಜೀವನ ಸಂಜೀವನ
ತಂಪಲ ಜೇನಿಂಪಲ ನನ್ನ ಉಸಿರಿಗೆ ನೀನೇ
ತಂಪಲಾ ಜೇನಿಂಪಲಾ
ನೀನು ಮುನಿದರೆ ಬಿಸಿಲ್ ನೀನೊಲಿಯೆ ತಣ್ ನೆಳಲ್
ನನ್ನ ಬಾಳಿಗೆ, ತಂಪಲಾ ನೀ ಜೇನಿಂಪಲಾ
ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನಾ ಸಂಜೀವನಾ ಜೀವನ ಸಂಜೀವನ
ಕಂಪಲ ಸವಿ ತೊಂಪಲ ಪದ್ಮಹೃದಯಕೆ ನೀನೇ
ಕಂಪಲಾ ಸವಿ ತೊಂಪಲಾ
ನೀನಪ್ಪಲಾ ನಾ ಅಮೃತಾ ನೀ ತಪ್ಪಿದರೆ ನಾ ಮೃತ
ನನ್ನೆದೆಯ ಕಮಲದ ಕಂಪಲಾ ನೀ ಸವಿ ತೊಂಪಲಾ
ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನಾ ಸಂಜೀವನಾ ಜೀವನ ಸಂಜೀವನ
ಚಿತ್ರ: ಹಂತಕನ ಸಂಚು
ಸಾಹಿತ್ಯ: ಕುವೆಂಪು
ಸಂಗೀತ: ವಿಜಯಭಾಸ್ಕರ್
ಗಾಯನ: ಜಯಚಂದ್ರನ್ ಮತ್ತು ವಾಣಿಜಯರಾಂ
Tag: Jeevana Sanjeevana nanna jeevake neene
ಕಾಮೆಂಟ್‌ಗಳು