ವಸಂತ ಬರೆದನು ಒಲವಿನ ಓಲೆ
ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ
ಪ್ರೇಮಿಗೆ ಓರ್ವಳೆ ನಲ್ಲೆ
ಹೂಗಳು ದುಂಬಿಯ ಚುಂಬನದಿಂದ
ಪುಳಕಿತವಾಗಿಹ ಕಾಲ
ಮಧುಮಯ ಯೌವನ ಮೈ ಮನ ತುಂಬಿ
ಮೆರೆದಿಹ ವಸಂತ ಕಾಲ
ತೀರದ ಆಸೆಯ ಆರದ ಉರಿಯ
ವಿರಹಿಗೆ ತಂದಿಹ ಕಾಲ
ಬಯಕೆಯು ಅನಂತ ಮುಖದಲಿ ಹೊಮ್ಮಿ
ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು
ಎಲ್ಲೆಡೆ ಕಾಣುವ ಕಾಲ
ಬಳ್ಳಿಯು ಹೆಮ್ಮರ ಆಸರೆ ಕೋರಿ
ತೋಳನು ಬಳಸುವ ಕಾಲ
ಯಾವುದೋ ಮೋಡಿಯ ಮಾದಕ ನಿಶೆಯಲಿ
ಎಲ್ಲವೂ ಇಂದ್ರಜಾಲ
ಮಾಯೆಯ ಅಪ್ಪುಗೆ ಕೈಸೆರೆಯಲ್ಲಿ
ಅಳಿಯದ ವಸಂತಕಾಲ
ಪ್ರೇಮವೋ ಪ್ರೀತಿಯೋ ಪ್ರಣಯವು ಏನೋ
ಲೀಲೆಯನಾಡುವ ಕಾಲ
ಚಿತ್ರ: ಬೆಸುಗೆ
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ
ಪ್ರೇಮಿಗೆ ಓರ್ವಳೆ ನಲ್ಲೆ
ಹೂಗಳು ದುಂಬಿಯ ಚುಂಬನದಿಂದ
ಪುಳಕಿತವಾಗಿಹ ಕಾಲ
ಮಧುಮಯ ಯೌವನ ಮೈ ಮನ ತುಂಬಿ
ಮೆರೆದಿಹ ವಸಂತ ಕಾಲ
ತೀರದ ಆಸೆಯ ಆರದ ಉರಿಯ
ವಿರಹಿಗೆ ತಂದಿಹ ಕಾಲ
ಬಯಕೆಯು ಅನಂತ ಮುಖದಲಿ ಹೊಮ್ಮಿ
ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು
ಎಲ್ಲೆಡೆ ಕಾಣುವ ಕಾಲ
ಬಳ್ಳಿಯು ಹೆಮ್ಮರ ಆಸರೆ ಕೋರಿ
ತೋಳನು ಬಳಸುವ ಕಾಲ
ಯಾವುದೋ ಮೋಡಿಯ ಮಾದಕ ನಿಶೆಯಲಿ
ಎಲ್ಲವೂ ಇಂದ್ರಜಾಲ
ಮಾಯೆಯ ಅಪ್ಪುಗೆ ಕೈಸೆರೆಯಲ್ಲಿ
ಅಳಿಯದ ವಸಂತಕಾಲ
ಪ್ರೇಮವೋ ಪ್ರೀತಿಯೋ ಪ್ರಣಯವು ಏನೋ
ಲೀಲೆಯನಾಡುವ ಕಾಲ
ಚಿತ್ರ: ಬೆಸುಗೆ
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
Tag: Vasanta Baredanu olavina ole, Vasantha baredanu olavina ole
ಕಾಮೆಂಟ್‌ಗಳು