ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾಮೆಯ ನೋಡಲು ತಾ ಬಂದ

ಭಾಮೆಯ ನೋಡಲು ತಾ ಬಂದ
ಬೃಂದಾವನದಿಂದ ಮುಕುಂದ

ಕಣ್ಸನ್ನೆಯಲೇ ಕನ್ಯೆಯ ಮನ ಸೆಳೆದ
ಚಿನ್ಮಯ ಮೂರುತಿ ಶ್ರೀಗೋವಿಂದ
ಭಾಮೆಯ ನೋಡಲು ತಾ ಬಂದ
ಬೃಂದಾವನದಿಂದ ಮುಕುಂದ

ಬಾಗಿಲ ಮರೆಯಾಗಿ ನಾಗೋಲಿಯ ದಿನ
ರಾಗೋಲ್ಲಾಸದಿ ಊದಿದ ಕೊಳಲಿನ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಆಗರಿವಾಯಿತು ಅವನೆ ಜನಾರ್ದನ
ಭಾಮೆಯ ನೋಡಲು ತಾ ಬಂದ
ಬೃಂದಾವನದಿಂದ ಮುಕುಂದ

ಚಿತ್ರ: ಸ್ಕೂಲ್ ಮಾಸ್ಟರ್
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯನ: ಸೂಲಮಂಗಳಂ ರಾಜಲಕ್ಷ್ಮಿ
Tag: Bhaameya nodalu taa banda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ