ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಏನು ದಾಹ ಯಾವ ಮೋಹ


ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ವ್ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ

ಏನು ದಾಹ ಯಾವ ಮೋಹ ತಿಳಿಯದಾಗಿದೆ
ಸ್ವಾಮಿ, ಇನ್ನು ನಿನ್ನ ಹೆಸರ ಹೇಳೊ ಆಸೆಯಾಗಿದೆ

ಸಾಕು ಎಂಬ ಮಾತು ಮರೆತು ಮನವು ನಿನ್ನ ಸೇರಿದೆ
ಚರಣ ಕಮಲ ಸ್ಮರಿಸಿದೆ ದುಂಬಿಯಾಗಿ ಹಾಡಿದೆ

ಜೇನಿಗಿಂತ ಸಿಹಿಯು ನಿನ್ನ ನಾಮದಲ್ಲಿ ತುಂಬಿದೆ
ನುಡಿಯೆ ಮಾತು ಸಾಲದು ಮನವು ಅರಳಿನಲಿವುದು

ಬೆಳದಿಂಗಳ ಮಳೆಯಲ್ಲಿ ನಡೆವಹಾಗೆ ನನ್ನಲಿ
ಏನೊ ಮಧುರ ಭಾವನೆ ಏನೊ ಕಂಡ ಕಲ್ಪನೆ

ಗಾಳಿಗಿಂತ ಹಗುರವಾಗಿ ದೂರ ತೇಲಿ ಹೋಗುವೆ
ಬೆಳಕಿನಲ್ಲಿ ಬೆರೆಯುವೆ ನಿನ್ನನಾಗ ಕಾಣುವೆ

ಏನು ದಾಹ ಯಾವ ಮೋಹ ತಿಳಿಯದಾಗಿದೆ
ಸ್ವಾಮಿ, ಇನ್ನು ನಿನ್ನ ಹೆಸರ ಹೇಳೊ ಆಸೆಯಾಗಿದೆ


ಸಾಹಿತ್ಯ: ಚಿ. ಉದಯಶಂಕರ್

Tag: Enu dhaha yava moha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ