ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋವಿಂದ ನಿನ್ನ ನಾಮವೆ ಚಂದ


ಗೋವಿಂದ ನಿನ್ನ ನಾಮವೆ ಚಂದ
ಗೋವಿಂದಾ ನಿನ್ನ ನಾಮವೆ ಚಂದ 

ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ
ನಿರ್ಮಲಾತ್ಮಕನಾಗಿ ಇರುವುದೆ ಆನಂದ

ಸೃಷ್ಠಿ ಸ್ಥಿತಿಲಯ ಕಾರಣ ಗೋವಿಂದ
ಈ ಪರಿ  ಮಹಿಮೆಯ ತಿಳಿಯುವುದಾನಂದ
ಮಂಗಳ ಮೂರುತಿ ಪುರಂದರ ವಿಠಲನ
ಹಿಂಗದ ದಾಸರ ಸಲಹುವುದಾನಂದ

ಸಾಹಿತ್ಯ: ಪುರಂದರದಾಸರು

Tag: Govinda ninna namave chanda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ