ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಾಡುವ ಮುರಳಿಯ


ಹಾಡುವ ಮುರಳಿಯ
ಕುಣಿಯುವ ಗೆಜ್ಜೆಯ
ಎದೆಯಲಿ ಒಂದೇ ರಾಗ
ಅದು ಆನಂದ ಭೈರವಿ ರಾಗ
ಕರೆಯುವ ಕೊಳಲಿನ

ನಲಿಯುವ ಗೆಜ್ಜೆಯ
ಎದೆಯಲಿ ಪ್ರೇಮ ಪರಾಗ
ಅದು ಆನಂದ ಭೈರವಿ ರಾಗ
ಹೊಳೆವ ಗೆಜ್ಜೆಯ ನಾದವ ಕೇಳಿ

ನಾಟ್ಯ ಸರಸ್ವತಿ ಕುಣಿದು
ಮನಸು ಮುರಳಿಯ ಗಾನದಿ ಸೇರಿ
ಮಥುರಾ ನಗರಿಗೆ ತೇಲಿ
ಯಮುನಾ ನದಿಯಲಿ ಈಜುತಿದೆ
ಸ್ವರಗಳ ಅಲೆಯಲಿ ತೇಲುತಿದೆ
ಹೆಜ್ಜೆಯ ತಾಳ

ಗೆಜ್ಜೆಯ ಮೇಳ
ಜೀವವ ಕುಣಿಸಿರುವಾಗ
ಕಣ್ಣೇ ಕವಿತೆಯ ಹಾಡಿ ಕುಣಿಸಿ
ಪ್ರೀತಿಯ ತುಂಬಿರುವಾಗ
ಹರುಷದಿ ಹೃದಯ ತೇಲುತಿದೆ
ಬದುಕೇ ಹುಣ್ಣಿಮೆ ಆಗುತಿದೆ

ಚಿತ್ರ: ಆನಂದ ಭೈರವಿ
ರಚನೆ: ಸೋರಟ್ ಅಶ್ವಥ್
ಸಂಗೀತ: ರಮೇಶ್ ನಾಯ್ಡು
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್ ಮತ್ತು ವಾಣಿ ಜಯರಾಂ


Tag: Haduva muraliya kuniyuva gejjeya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ