ಸುತ್ತ ಮುತ್ತ ಯಾರೂ ಇಲ್ಲ
ಸುತ್ತ ಮುತ್ತ
ಯಾರೂ ಇಲ್ಲ
ನಾನು ನೀನೇ ಇಲ್ಲಿ ಎಲ್ಲಾ
ಬಾರೆ ಸನಿಹಕೆ
ಕೆಂಪು ಕೆನ್ನೆಗೆ ಜೇನ ಅಧರಕೆ ಕೊಡುವೇ ಕಾಣಿಕೆ
ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ
ಅದಕೇ ಹೆದರಿಕೆ
ನಿನ್ನ ಮಾತಿಗೆ ಮನದ ಆಸೆಗೆ ಬಂತೂ ನಾಚಿಕೆ
ಕಣ್ಣ ಮಿಂಚಿನಲಿ ಸಂಚು ಮಾಡುತಿಹೆ ನನ್ನೇ ನೋಡುತಾ
ಸನ್ನೆ ಮಾತಿನಲಿ ಏಕೆ ಕೆಣಕುತಿಹೆ ದೂರಾ ಓಡುತಾ
ಗಾಳಿ ಬೀಸುತಿದೆ ಬಳ್ಳಿ ನಡುವಿದು ಬಳುಕಿ ಆಡಿದೆ
ಬಯಕೆ ಕಣ್ಣಲಿದೆ ಮನಸು ತೂಗುತಿದೆ ಅದಕೇ ಓಡಿದೆ
ಸಂಜೆ ಓಡಿದೆ, ಇರುಳು ಕಾದಿದೆ.
ಹೂವು ಎಂದಿಗೂ ಮುಡಿಪು ದೇವರಿಗೆ ಏಕೇ ಕಾತರ
ನಾನು ನಿನ್ನವಳು ನೀನು ನನ್ನವನು ಬೇಡ ಅವಸರ
ಮುತ್ತು ಜಾರಿದರೆ ಹೊತ್ತು ಮೀರಿದರೆ ಮತ್ತೇ ದೊರಕದು
ನಿನ್ನ ಸೇರದೆಲೆ ದೂರವಾದರೆ ಜೀವ ನಿಲ್ಲದು
ಆಸೆ ತೀರದೇ ಮನಸು ಸೋತಿದೆ
ಚಿತ್ರ: ಕಳ್ಳ ಕುಳ್ಳ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ರಾಜನ್ - ನಾಗೇಂದ್ರ
ಗಾಯನ : ಪಿ.ಬಿ. ಶ್ರೀನಿವಾಸ್, ವಾಣಿ ಜಯರಾಮ್
ನಾನು ನೀನೇ ಇಲ್ಲಿ ಎಲ್ಲಾ
ಬಾರೆ ಸನಿಹಕೆ
ಕೆಂಪು ಕೆನ್ನೆಗೆ ಜೇನ ಅಧರಕೆ ಕೊಡುವೇ ಕಾಣಿಕೆ
ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ
ಅದಕೇ ಹೆದರಿಕೆ
ನಿನ್ನ ಮಾತಿಗೆ ಮನದ ಆಸೆಗೆ ಬಂತೂ ನಾಚಿಕೆ
ಕಣ್ಣ ಮಿಂಚಿನಲಿ ಸಂಚು ಮಾಡುತಿಹೆ ನನ್ನೇ ನೋಡುತಾ
ಸನ್ನೆ ಮಾತಿನಲಿ ಏಕೆ ಕೆಣಕುತಿಹೆ ದೂರಾ ಓಡುತಾ
ಗಾಳಿ ಬೀಸುತಿದೆ ಬಳ್ಳಿ ನಡುವಿದು ಬಳುಕಿ ಆಡಿದೆ
ಬಯಕೆ ಕಣ್ಣಲಿದೆ ಮನಸು ತೂಗುತಿದೆ ಅದಕೇ ಓಡಿದೆ
ಸಂಜೆ ಓಡಿದೆ, ಇರುಳು ಕಾದಿದೆ.
ಹೂವು ಎಂದಿಗೂ ಮುಡಿಪು ದೇವರಿಗೆ ಏಕೇ ಕಾತರ
ನಾನು ನಿನ್ನವಳು ನೀನು ನನ್ನವನು ಬೇಡ ಅವಸರ
ಮುತ್ತು ಜಾರಿದರೆ ಹೊತ್ತು ಮೀರಿದರೆ ಮತ್ತೇ ದೊರಕದು
ನಿನ್ನ ಸೇರದೆಲೆ ದೂರವಾದರೆ ಜೀವ ನಿಲ್ಲದು
ಆಸೆ ತೀರದೇ ಮನಸು ಸೋತಿದೆ
ಚಿತ್ರ: ಕಳ್ಳ ಕುಳ್ಳ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ರಾಜನ್ - ನಾಗೇಂದ್ರ
ಗಾಯನ : ಪಿ.ಬಿ. ಶ್ರೀನಿವಾಸ್, ವಾಣಿ ಜಯರಾಮ್
Tag: sutta mutta yaaru illa, sutta mutta yaru illa
ಕಾಮೆಂಟ್‌ಗಳು