ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೊಡ್ಡವರೆಲ್ಲ ಜಾಣರಲ್ಲ

ದೊಡ್ಡವರೆಲ್ಲ ಜಾಣರಲ್ಲ
ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ
ಎಂದೂ ನಿಜವಲ್ಲ ಗೆಳೆಯ
ಎಂದೂ ನಿಜವಲ್ಲ
ದೊಡ್ಡವರೆಲ್ಲ ಜಾಣರಲ್ಲ

ದೊಡ್ಡ ಮನುಷ್ಯರು ದೊಡ್ಡವರಲ್ಲ, ದೊಡ್ಡವರಲ್ಲ
ರಾತ್ರಿಯ ಹೊತ್ತೇ ನುಗ್ಗುವರೆಲ್ಲ, ನುಗ್ಗುವರೆಲ್ಲ
ಕೋಟೆಗೆ ಕನ್ನ ಹಾಕುವರಲ್ಲ
ಗಂಟನು ಕಟ್ಟಿ ಓಡುವರಲ್ಲ
ತಕದಿಮಿ ತಕದಿಮಿ ತಕದಿಮಿ
ತಕದಿಮಿ ಬಡಿದರೆ ಆಗ ತೋಡಿ ರಾಗ ಹಾಡುವರಲ್ಲ

ಸರಿಗಮಪದನಿಸ ಹೇಳುವರೆಲ್ಲ ಸಂಗೀತವನು ಬಲ್ಲವರಲ್ಲ
ಸರಿ ಗಮ ಪದ ನಿಸ
ಸರಿಗಮಪದನಿಸ ನಿಸದಪರಿಗಮಪ ಹೇಳುವರೆಲ್ಲ 
ಸಂಗೀತವನು ಬಲ್ಲವರಲ್ಲ
ಎರಡಕ್ಷರವ ಕಲಿತವರೆಲ್ಲ ಪಂಡಿತರಂತೆ ನಟಿಸುವರಲ್ಲ
ಆ ಏ ಈ ಔ ಊ ಐ ಅಂ
ಒಂದೊಂದ್ಲ ಒಂದು ಮಗ್ಗಿಯ ಮುಂದೆ ಬೇರೆ ಸುಲಭದ ಲೆಕ್ಕವೆ ಇಲ್ಲ

ಅರಗಿಳಿ ನೀರಲಿ ಈಜುವುದಿಲ್ಲ, ಈಜುವುದಿಲ್ಲ
ಮೊಸಳೆಯು ಮೇಲೆ ಹಾರುವುದಿಲ್ಲ, ಹಾರುವುದಿಲ್ಲ
ಕಾಗೆಗೆ ಗಂಟಲು ಕಟ್ಟುವುದಿಲ್ಲ
ಕಾ ಕಾ ಕಾ
ಗೂಬೆಯ ಯಾರೂ ಸಾಕುವುದಿಲ್ಲ
ಊಂ ಊಂ ಊಂ
ಇಂಥ ಶಿಷ್ಯರು ಬೇಕು ಎಂದರು ಬೇರೆ ಯಾರ್ಗೂ ಸಿಕ್ಕೋದಿಲ್ಲ
ಇಲ್ಲ, ಇಲ್ಲ, ಇಲ್ಲ, ಇಲ್ಲ

ಚಿತ್ರ: ಗುರು ಶಿಷ್ಯರು
ರಚನೆ: ಚಿ. ಉದಯಶಂಕರ್
ಸಂಗೀತ: ಕೆ ವಿ ಮಹಾದೇವನ್
ಗಾಯನ: ಎಸ್  ಪಿ ಬಾಲಸುಬ್ರಮಣ್ಯಮ್ ಮತ್ತು ಸಂಗಡಿಗರು

Tag: Doddavarella jaanaralla


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ