ಎಳ್ಳೀರ್ ಎಳ್ಳೀರ್ ಎಳ್ಳೀರು
ಎಳ್ಳೀರ್ ಎಳ್ಳೀರ್ ಎಳ್ಳೀರು
ಎಳ್ಳೀರ್ ಎಳ್ಳೀರ್ ಎಳ್ಳೀರು
ಎಳ್ಳೀರ್ ಕುಡಿಯೋರ್ ಒಳ್ಳೇರು
ಹಳ್ಳಿ ಜನರು ದಿಳ್ಳಿ ಜನರು
ಎಳ್ಳೀರ್ ಕುಡಿಯೋರ್ ಒಳ್ಳೇರು
ಅಜ್ಜ ಅಜ್ಜಿ ಮಕ್ಕಳಿಗೆಲ್ಲ
ಕುಡಿಸಿ ಎಳ್ಳೀರ್ ಎಳ್ಳೀರು
ಮದ್ದೂರ್ ಮದ್ದೂರ್ ಎಳ್ಳೀರು
ಕಾಯಿಲೆಗೆ ಮದ್ದು ಎಳ್ಳೀರು
ಕೆನ್ನಿಂಗ್ ಎಳ್ಳೀರ್ ಎಳ್ಳೀರು
ಹಸುರು ನಿಂಗ ಎಳ್ಳೀರು
ಗಂಗಾಪಾನಿ ಎಳ್ಳೀರು
ಇಲ್ಲೇ ಇರೋದ್ ತಿಪಟೂರು
ಎಳ್ಳೀರ್ ಅಂದ್ರೆ ಎಳ್ಳೀರ್ ಅಲ್ಲ
ತಂಪು ತಂಪು ಪನ್ನೀರು
ಇಂಥ ಎಳ್ಳೀರ್ ಎಳ್ಳೀರು
ಹೊಟ್ಟೆ ಕಟ್ಟೆ ತೊಳೆಯುತ್ತೆ
ರೋಗದ ಮೊಟ್ಟೆ ಕೊಲ್ಲುತ್ತೆ
ಮುಖದಲಿ ಕಳೆಯು ಉಕ್ಕುತ್ತೆ
ಪೆಪ್ಸಿ ಕೋಲ ಪಾಪಿ ನೀರು
ಬಣ್ಣದ್ ಬಾಲ ಬೆಂಕಿ ಚೂರು
ಇಲಿಯು ಎಳ್ಳೀರ್ ಕುಡಿಯುತ್ತೆ
ಕೋತಿ ಎಳ್ಳೀರ್ ಕುಡಿಯುತ್ತೆ
ಎಷ್ಟ್ ದಿನವಾಯ್ತು ಸ್ವಾಮಿ ನೀವು
ಇಂಥ ಎಳ್ಳೀರ್ ಎಳ್ಳೀರ್ ಕುಡ್ದು
ಎಷ್ಟ್ ದಿನವಾಯ್ತು ತಾಯಿ ನೀವು
ಎಳ್ಳೀರ್ ಎಳ್ಳೀರ್ ಎಳ್ಳೀರ್ ಕುಡ್ದು
ನಿಂಬೆ ಎಳ್ಳೀರ್ ಎಂಥ ಜೋಡಿ
ಜೇನಿನ ಜೊತೆಗೆ ಎಳ್ಳೀರ್ ಮೋಡಿ
ಕೊಚ್ಚಿ ಕೊಡಿರಿ ಎಳನೀರು
ಮಕ್ಕಳ ಹಕ್ಕು ಎಳನೀರು
ಸಾಹಿತ್ಯ: ಕೃಷ್ಣಮೂರ್ತಿ ಬಿಳಿಗೆರೆ
Tag: Elleer Elleer Elleeru
Tag: Elleer Elleer Elleeru
ಕಾಮೆಂಟ್‌ಗಳು