ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕುಹೂ ಕುಹೂ


ಕುಹೂ ಕುಹೂ, ಕುಹೂ ಕುಹೂ,
ಕುಹೂ ಕುಹೂ
ಎನ್ನುತ ಹಾಡುವ ಚಿನ್ನದ ಕಂಠದ ಕೋಗಿಲೆಯೇ

ಮಾವಿನ ತಳಿರೊಳು ದೇವತೆಯಂದದಿ
ನೀನಡೆಗೇನನು ಸಾರುತಿಹೆ
ಕುಹೂ ಕುಹೂ ಕುಹೂ ಕುಹೂ

ನಲ್ಲನ ಕೂಡುವ ನಲ್ಲೆಯ ಕರೆಯೇ
ತಣಿಸಿಹ ಮಾಮರದುಯ್ಯಲೆಗೇ
ನವಚೈತನ್ಯದ ನವಸೌಂಧರ್ಯದ
ನವಮಧು ನಿದುವಲೆದುಯ್ಯಾಲೆಗೇ

ಬೆಡಗಿನ ಬಿಂಕದ ಹುಡುಗಿಯ ತೆರದಲಿ
ವನವಿರೆ ಹೊಸ ವೈಯಾರದಲಿ
ಮಧುರ ವಿಹಂಗಮ ಕವಿಯೇ ಕೋಗಿಲೆ
ಕವಿಯನು ಕರೆ ಸುರ ಗಾನದಲೀ

ಕುಹೂ ಕುಹೂ, ಕುಹೂ ಕುಹೂ,
ಕುಹೂ ಕುಹೂ
ಎನ್ನುತ ಹಾಡುವ ಚಿನ್ನದ ಕಂಠದ ಕೋಗಿಲೆಯೇ
ಕುಹೂ ಕುಹೂ, ಕುಹೂ ಕುಹೂ,
ಕುಹೂ ಕುಹೂ

ಸಾಹಿತ್ಯ: ಕುವೆಂಪು

ಸಂಗೀತ: ಲಕ್ಷ್ಮಣ  ಬೆರ್ಲೇಕರ್

ಗಾಯನ: ಮನ್ನಾಡೆ.


Tag: Kuhoo kuhoo, ennuta haduva chinnada kantada




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ