ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇವಳೇ ವೀಣಾಪಾಣಿ


ಇವಳೇ ವೀಣಾಪಾಣಿ
ವಾಣಿ. ತುಂಗಾ ತೀರ ನಿವಾಸಿನಿ
ಶೃಂಗೇರಿ ಪುರವಾಸಿನಿ

ಶಾರದ ಮಾತೆ ಮಂಗಳದಾತೆ
ಸುರಸಂಸೇವಿತೆ ಪರಮ ಪುನೀತೆ
ತುಂಗಾ ಸಲಿಲ ತೀರ ವಿರಾಜಿತೆ
ತುಂಗಾ ಸಲಿಲ ತೀರ ವಿರಾಜಿತೆ
ನಾರದ ಜನನಿ ಸುಜನ ಸಂಪ್ರೀತೆ
ಇವಳೇ ವೀಣಾಪಾಣಿ
ವಾಣಿ ತುಂಗಾ ತೀರ ನಿವಾಸಿನಿ
ಶೃಂಗೇರಿ ಪುರವಾಸಿನಿ

ಆದಿಶಂಕರ ಅರ್ಚಿತೆ ಮಧುರೆ
ನಾದಪ್ರಿಯೆ ನವಮಣಿಮಯಹಾರೆ
ವೇದಾಖಿಲಶಾಸ್ತ್ರ ಆಗಮಸಾರೆ
ವಿದ್ಯಾದಾತೆ ಯೋಗವಿಚಾರೆ
ಇವಳೇ ವೀಣಾಪಾಣಿ
ವಾಣಿ ತುಂಗಾ ತೀರ ನಿವಾಸಿನಿ
ಶೃಂಗೇರಿ ಪುರವಾಸಿನಿ

ಸಾಹಿತ್ಯ: ಆರ್.ಎನ್.ಜಯಗೋಪಾಲ್


Tag: Ivale veenapani

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ