ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕನ್ನಡ ನಾಡಿನ ಜೀವನದಿ

ಗಂಗೆಯ ತುಂಗೆಯ ಪ್ರೀತಿಯ ಸೋದರಿ
ಪಾವನೆ ಪುಣ್ಯನದಿ
ಬಳುಕುತ ಕುಲುಕುತ ಹರುಷವ ಚೆಲ್ಲುತ
ಸಾಗುವ ಧನ್ಯ ನದಿ
ತಾ ಹೆಜ್ಜೆಯ ಇಟ್ಟೆಡೆ ಅಮೃತ ಹರಿಸಿ ಕಾಯುವ ಭಾಗ್ಯನದಿ

ಕನ್ನಡ ನಾಡಿನ ಜೀವನದಿ  ಕಾವೇರಿ
ಓ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ವಯ್ಯಾರಿ
ಓ ದೇವನದಿ ಈ ವಯ್ಯಾರಿ
ಈ ತಾಯಿಯೂ ನಕ್ಕರೆ
ಸಂತೋಷದ ಸಕ್ಕರೆ
ಮಮತೆಯಾ ಮಾತೆಗೆ
ಭಾಗ್ಯದಾ ಧಾತೆಗೆ
ಮಾಡುವೆ ಭಕ್ತಿಯ ವಂದನೆ

ಕೊಡಗಲಿ ನೀ ಹುಟ್ಟಿ
ಹರಿಯುವೆ ನಲಿವಿಂದ
ತರುತಲಿ ಎಲ್ಲೆಲ್ಲೂ
ಆನಂದ
ಹಸಿರಿನ ಬೆಳೆ ತಂದು
ಕುಡಿಯುವ ಜಲ ತಂದು
ಚೆಲ್ಲುವೆ ನಗೆಯೊಂದ
ಶ್ರೀಗಂಧ
ಕುಲಕುತ ವೇಗದ ಜಲಪಾತದಲಿ
ವಿದ್ಯುತ್ ನೀಡುವೆ
ಬಯಲಲಿ ಕಾಡಲಿ ಕಲಕಲ ಹರಿಯುತ
ನಾಟ್ಯವನಾಡುವೆ
ಮಂದಗಾಮಿನಿ
ಶಾಂತಿಧಾಯಿನೀ
ಚಿರನೂತನ ಚೇತನ ಧಾತೆಯು ನೀನೆ
ದಕ್ಷಿಣ ಮಂದಾಕಿನಿ

ಹುಟ್ಟುವ ಕಡೆ ಒಂದು
ಫಲಕೊಡೊ ಕಡೆಯೊಂದು
ಸಾಗರದಲಿ ನದಿ ಎಂದೂ
ಸಂಗಮವು
ತೌರಿನ ಮನೆಯೊಂದು
ಗಂಡನ ಮನೆಯೊಂದು
ಹೆಣ್ಣಿಗೆ ಇದೆ ಎಂದೂ
ಜೀವನವು
ತಂದೆಯು ತಾಯಿಯು
ಅಣ್ಣನು ತಂಗಿಯು
ಎಲ್ಲಾ ದೂರವು
ಹೊಸ ಮನೆ ಹೊಸ ಜನ
ಹೊಸ ಹೊಸ ಬಂಧವು
ಅಲ್ಲೇ ಸಂತೋಷವು
ಮನೆಯ ದೀಪವು
ಬಾಳ ಸಂಗೀತವು
ಮನ ಮೆಚ್ಚಿದ ಮಡದಿಯು
ಸಿಕ್ಕಿದ ವೇಳೆ
ಸ್ವರ್ಗ ಸಂಸಾರವು

ಚಿತ್ರ: ಜೀವನದಿ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಹಂಸಲೇಖ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಮ್
 
Tag: Kannada naadina jeevanadi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ