ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾನೊಂದು ತೀರ ನೀನೊಂದು ತೀರ

ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರಾ
ಪ್ರೀತಿ ಹೃದಯ ಭಾರ

ಹೂವು ಚೆಲುವಾಗಿ ಅರಳಿ ದುಂಬಿ ಸೆಳೆಯೋದು ಸಹಜ
ಹೆಣ್ಣು ಸೊಗಸಾಗಿ ಬೆಳೆದು ಗಂಡು ಬಯಸೋದು ಸಹಜ
ಹೀಗೇಕೆ ನಿನಗೆ ಏಕಾಂಗಿ ಬದುಕು
ಹೀಗೇಕೆ ನಿನಗೆ ಏಕಾಂಗಿ ಬದುಕು
ಸಂಗಾತಿ ಇರದೆ ಬಾಳೆಲ್ಲ ಬರಿದು

ಭೂಮಿ ಆಕಾಶ ಸೇರಿ ಕಲೆತು ಕೂಡೋದು ಉಂಟೆ
ಕಡಲು ತಾನಾಗಿ ಹರಿದು ನದಿಗೆ ಸೇರೋದು ಉಂಟೆ?
ಚೂರಾದ ಹೃದಯ ಮತ್ತೊಮ್ಮೆ ಮಿಡಿದು
ಚೂರಾದ ಹೃದಯ ಮತ್ತೊಮ್ಮೆ ಮಿಡಿದು
ಜೀವಂತ ಬದುಕಿ ಸಂಬಂಧ ತರದು
ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರಾ
ಪ್ರೀತಿ ಹೃದಯ ಭಾರ

ಚಿತ್ರ: ಅರುಣರಾಗ
ಸಾಹಿತ್ಯ:  ದೊಡ್ಡರಂಗೇಗೌಡ
ಸಂಗೀತ:  ಎಂ. ರಂಗರಾವ್
ಗಾಯನ: ಕೆ.ಜೆ. ಏಸುದಾಸ್ ಮತ್ತು ಚಿತ್ರಾ
Tag: Nanondu teera neenondu teera, Naanondu theera neenondu theera

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ