ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಲಿಯುಗದಲಿ ಹರಿನಾಮವ ನೆನೆದರೆ


ಕಲಿಯುಗದಲಿ ಹರಿನಾಮವ ನೆನೆದರೆ
ಕುಲಕೋಟಿಗಳು ಉದ್ಧರಿಸುವವೋ ರಂಗ
ಸುಲಭದ ಮುಕುತಿಗೆ ಸುಲಭನೆಂದೆನಿಸುವ
ಜಲರುಹನಾಭನ ನೆನೆ ಮನವೇ

ಸ್ನಾನವನರಿಯೆ ಮೌನವನರಿಯೆ
ಧ್ಯಾನವನರಿಯೆನೆಂದೆನಬೇಡ
ಜಾನಕಿವಲ್ಲಭ ದಶರಥನಂದನ
ಗಾನವಿನೋದನ ನೆನೆ ಮನವೇ

ಅರ್ಚಿಸಲಿಯರಿಯೆ ಮೆಚ್ಚಿಸಲರಿಯೇ
ಉಚ್ಛನು ನಾನೆಂದೆನಬೇಡ
ಅಚ್ಯುತಾನಂತ ಗೋವಿಂದಮುಕುಂದನ
ಇಚ್ಛೆಯಿಂದಲಿ ನೆನೆ ಮನವೇ.

ಜಪವೊಂದರಿಯೇ ತಪವೊಂದರಿಯೇ
ಉಪದೇಶದಿಂದೇನೆನಬೇಡ
ಅಪಾರ ಮಹಿಮ ಶ್ರೀಪುರಂದರವಿಠ್ಠಲನ
ಉಪಾಯದಿಂದಲಿ ನೆನೆ ಮನವೇ.


ಸಾಹಿತ್ಯ: ಪುರಂದರದಾಸರು


Tag: Kaliyugadali hari naamava nenedare

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ