ಹೊನ್ನು ತಾ ಗುಬ್ಬಿ ಹೊನ್ನು ತಾ
ಹೊನ್ನು ತಾ ಗುಬ್ಬಿ ಹೊನ್ನು ತಾ
ನಮ್ಮ ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ
ಆಗಮವನು ತಂದು ಜಗಕಿತ್ತ ಕೈಗೆ
ಸಾಗರವ ಮಥಿಸಿ ಸುಧೆ ತಂದ ಕೈಗೆ
ತೂಗಿ ಮಾತಾಡುವ ಸ್ಥೂಲಕಾಯನ ಕೈಗೆ
ಸಾಗರ ಪತಿ ನಮ್ಮ ನರಸಿಂಹನ ಕೈಗೆ
ಬಲಿಯ ದಾನವ ಬೇಡಿ ಕೊಂದಂಥ ಕೈಗೆ
ಛಲದಿಂದ ಕ್ಷತ್ರಿಯರ ಅಳಿದಂಥ ಕೈಗೆ
ಗೆಲವಿಂದ ವಿಭೀಷಣಗೆ ಅಭಯವಿತ್ತ ಕೈಗೆ
ಬಲುಬೆಟ್ಟ ಬೆರಳಲ್ಲಿ ಎತ್ತಿದ ಕೈಗೆ
ಪತಿವ್ರತೆಯರ ವ್ರತ ಅಳಿದಂಥ ಕೈಗೆ
ಹಿತವಾಜಿಯನೇರಿ ಮರ್ದಿಸಿದಂಥ ಕೈಗೆ
ಸತಿಶಿರೋಮಣಿ ಲಕ್ಷೀಕಾಂತನ ಕೈಗೆ
ಚತುರ ಹೆಳವನಕಟ್ಟೆ ರಂಗನ ಕೈಗೆ
ಸಾಹಿತ್ಯ: ಹೆಳವನಕಟ್ಟೆ ಗಿರಿಯಮ್ಮನವರು
Tag: Honnu taa gubbi honnu taa
Tag: Honnu taa gubbi honnu taa
ಕಾಮೆಂಟ್‌ಗಳು