ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭುವನೇಶ್ವರಿಯ ನೆನೆ ಮಾನಸವೇ


ಭುವನೇಶ್ವರಿಯ ನೆನೆ ಮಾನಸವೇ 
ಭವ ಬಂಧಗಳ ಭೀತಿಯ ಬಿಡುವೆ
ಭವದಲಿ ಬರಿದೇ ನವೆಯದೇ ನೋಯದೇ
ತವ ಸುವಿಲಾಸದೆ ತಣಿಯುವೆ ಸುಖಿಸುವೆ
ಭುವನೇಶ್ವರಿಯ ನೆನೆ ಮಾನಸವೇ 
ಭವ ಬಂಧಗಳ ಭೀತಿಯ ಬಿಡುವೆ

ವೃಜಿನಂಗಳನು ವಿದಲಿಪ ಮಾತೆಯ
ತ್ರಿಜಗಜ್ಜನನಿಯ ತ್ರಿಗುಣಾತೀತೆಯ
ನಿಜ ಭಕ್ತಾವನ ಸುರವರ ಸುರಭಿಯ 
ಅಜ ಸನ್ನುತೆ ಶ್ರೀ ಹರಿಕೇಶಾಂಗಿಯ
ಭುವನೇಶ್ವರಿಯ ನೆನೆ ಮಾನಸವೇ 
ಭವ ಬಂಧಗಳ ಭೀತಿಯ ಬಿಡುವೆ

ರಚನೆ : ಮುತ್ತಯ್ಯ ಭಾಗವತರ್

ಗಾಯನ: ಮಹಾರಾಜಪುರಂ ಸಂತಾನಂ 

Tag: Bhuvaneswariya nene manasave, Bhuvaneshwariya nene maanasave

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ