ಮಹಾಮಾತೆಗೆ ನಮನ
ಓಂ ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋsಸ್ತುತೇ
ಸೃಷ್ಟಿಸ್ಥಿತಿವಿನಾಶಾನಾಂ ಶಕ್ತಿಭೂತೇ ಸನಾತನಿ
ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋsಸ್ತುತೇ
ಶರಣಾಗತದೀನಾರ್ತಪರಿತ್ರಾಣಪರಾಯಣೇ
ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋsಸ್ತುತೇ
ಜಯ ನಾರಾಯಣಿ ನಮೋsಸ್ತುತೇ
‘ಸೃಷ್ಟಿ ಸ್ಥಿತಿ ಸಂಹಾರಗಳ ಶಕ್ತಿ, ಸನಾತನಿ, ಗುಣಗಳಿಗೆ ಆಶ್ರಯಳೆ, ಸುಗುಣಮಯಿ, ನಾರಾಯಣಿ, ನಿನಗೆ ನಮಸ್ಕಾರ’.
‘ಶರಣಾಗತರಾದ ದೀನರನ್ನೂ ದುಃಖಿಗಳನ್ನೂ ಉದ್ಧರಿಸುವುದರಲ್ಲಿ ನಿರತೆಯಾದ ಎಲ್ಲರ ಕಷ್ಟಗಳನ್ನೂ ನಿವಾರಿಸುವ ತೇಜೋಮಯಿಯಾದ ನಾರಾಯಣಿ, ನಿನಗೆ ನಮಸ್ಕಾರ.’
ಕಾಮೆಂಟ್‌ಗಳು