ಏನು ಚೆಲುವಿನ ನಾಡು
ಬಳಸಿ ಬಂದೆನು ಸುತ್ತ
ಕನ್ನಡದ ನಾಡುಗಳ
ಸಿರಿಯನೋಡುತ್ತ
ತಾಯಡಿಯ ಹುಡಿಯ ತಲೆಗಾನುತ್ತ,
ಹರಕೆಯ ಪವಿತ್ರ ಯಾತ್ರೆಯಲಿ
ಏನು ಚೆಲುವಿನ ನಾಡು!
ಚೆಲುವು ಚೆಲ್ಲುವ
ನಾಡು!
ಕನ್ನಡದ ನಾಡು!
ಏನು ಚಿನ್ನದ ನಾಡು!
ನನ್ನೊಲುಮೆಯಾ
ನಾಡು!
ನಮ್ಮಿನಿಯ ನಾಡು!
ಕಾವೇರಿಯಿಂದ ಗೋದಾವರಿಯವರೆಗೆ
ಚಾಚಿರುವ
ನಾಡು!
ಬಳಸಿದೆನು,
ಸುತ್ತಿದೆನು,
ಕಣ್ದಣಿಯೆ ನೋಡಿದೆನು,
ಕುಣಿದು ಹಾಡಿದೆನು.
ಸಾಹಿತ್ಯ: ಬಿ ಎಂ. ಶ್ರೀ
ಚಿತ್ರ: ಹೊಸಹೊಳಲು ಲಕ್ಷ್ಮೀನಾರಾಯಣ
ದೇವಸ್ಥಾನ
Tag: Enu Cheluvina Naadu
Tag: Enu Cheluvina Naadu
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ಪ್ರತ್ಯುತ್ತರಅಳಿಸಿ