ನಯನತಾರಾ
ನಯನತಾರಾ
ತಾರೆಯಂತಹ ಮಿನುಗು ನಯನಗಳುಳ್ಳ ನಯನತಾರಾ ದಕ್ಷಿಣ ಭಾರತ ಚಿತ್ರರಂಗದ ಚೆಲುವಿನ ನಟಿ.
ನಯನತಾರಾ 1984ರ ನವೆಂಬರ್ 18ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಕುರಿಯನ್ ಕೊಡಿಯಾಟ್. ತಾಯಿ ಒಮಾನ ಕುರಿಯನ್. ಕೇರಳದ ಮೂಲದ ಕುಟುಂಬ ಇವರದು. ತಂದೆ ಭಾರತೀಯ ವಾಯುಪಡೆಯ ಅಧಿಕಾರಿಯಾಗಿದ್ದ ಕಾರಣ, ನಯನತಾರ ಉತ್ತರ ಭಾರತದ ಹಲವು ಭಾಗಗಳಲ್ಲಿ ಬಾಲ್ಯವನ್ನು ಕಳೆದರು. ಮುಂದೆ ತಿರುವಳ್ಳದಲ್ಲಿ ಬಾಳಿಕಮಡಮ್ ಗರ್ಲ್ಸ್ ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮಾಡಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಗಾಗಿ ತಿರುವಳ್ಳಾ ಮಾರ್ಥೊಮಾ ಕಾಲೇಜಿಗೆ ಸೇರಿದರು.
ನಯನತಾರಾ ಮಾಡಲಿಂಗ್ ಲೋಕಕ್ಕೆ ಕಾಲಿಟ್ಟು 2003ರಲ್ಲಿ ಮಲಯಾಳದ 'ಮನಾಸ್ಸಿನಕ್ಕರೆ' ಚಿತ್ರದಲ್ಲಿ ಪಾತ್ರ ವಹಿಸಿದರು ಮುಂದೆ ನಟುರಾಜವು, ಫಝಿಲ್ನ ಮತ್ತು ಮೋಹನ್ ಲಾಲ್ ಜೊತೆ ವಿಸ್ಮಯತಂಬುತ್ ಚಿತ್ರಗಳಲ್ಲಿ ನಟಿಸಿದರು.
ತಮಿಳು ಮತ್ತು ತೆಲುಗಿನಲ್ಲಿ ಅಪಾರ ಬೇಡಿಕೆ ಪಡೆದು ಅಯ್ಯಾ, ಘಜಿನಿ, ಪೆರಾರಾಸು, ಬಿಲ್ಲಾ, ಕುಸೆಲಾನ್, ಸತ್ಯಂ, ವಿಲ್ಲು ಆದುರ್ಗಳು, ಬಾಡಿಗಾರ್ಡ್, ಸಿಂಹ, ಬಾಸ್ ಎಂಜಿರಾ ಭಾಸ್ಕರನ್, ಶ್ರೀ ರಾಮ ರಾಜ್ಯಮ್, ಚಂದ್ರಮುಖಿ , ದುಬೈ ಸೀನು, ತುಲಿಯಾಸಿ, ಬಿಲ್ಲಾ, ಯಾರಡಿ ನೀ ಮೊಹಿನಿ, ಆಧವನ್, ಅಡರ್ಸ್ , ರಾಜಾ ರಾಣಿ, ಅರಂಬಮ್, ಥನಿ ಒರುವಾನ್, ಮಾಯಾ, ನಾನು ರೌಡಿ ಧಾನ್, ಬಾಬು ಬಂಗಾರಮ್ ಮತ್ತು ಇರು ಮುಗಾನ್ ಮೊದಲಾದ ಅನೇಕ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಾ ಸಾಗಿದ್ದಾರೆ. ಉಪೇಂದ್ರರ ಜೊತೆ 'ಸೂಪರ್' ಎಂಬ ಕನ್ನಡ ಮತ್ತು ತೆಲುಗಿನ ಚಿತ್ರದಲ್ಲಿ ನಟಿಸಿದ್ದಾರೆ.
ಹಲವು ಫಿಲಂಫೇರ್ ಪ್ರಶಸ್ತಿ, ಅಧಿಕ ಸಂಭಾವನೆ, ಹಲವು ಸುದ್ಧಿಗಳು ಹೀಗೆ ಜನಪ್ರಿಯತೆ ಮತ್ತು ಸುದ್ಧಿಯಲ್ಲಿರಲು ಏನೇನೊ ಬೇಕೊ ಎಲ್ಲ ನಯನತಾರಾ ಜೊತೆಗಿದೆ. ಜೊತೆಗ ಸೌಂದರ್ಯ, ಪ್ರತಿಭೆ ಎಲ್ಲವೂ ನಯನತಾರಾ ಅವರಲ್ಲಿ ಮೇಳೈಸಿವೆ.
ಸುಂದರವಾಗಿರುವ ನಯನತಾರಾ ಅವರ ಬದುಕು ಸುಂದರವಾಗಿ ಮುಂದುವರೆಯಲಿ.
On the birthday of actress Nayanthara
ಕಾಮೆಂಟ್‌ಗಳು