ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ

ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ
ನನ್ನ ನಿನ್ನಾ ಪಾಲಿಗೇ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ ದಿನವು ನಿತ್ಯ ಉಗಾದಿನೇ
ನನ್ನ ನಿಮ್ಮಾ ಪಾಲಿಗೇ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ

ನೀ ಪಕ್ಕ ಇದ್ರೆ ಹಿಂಗೆ, ಬೆಟ್ಟಾನ್ ಎತ್ತೀನ್ ಬೆಳ್ನಾಗೇ,
ಏಸೇ ಕಷ್ಟ ಬಂದ್ರೂ ನಮ್ಗೇs..., ಗೌರಾ!
ಏಸೇ ಕಷ್ಟ ಬಂದ್ರೂ ನಮ್ಗೆ,
ಮೀಸೇ ಬುಡ್ತೀನ್ ಸುಮ್ಮಗೇs....
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ.

ಈ ಜೀವ ನಿಮ್ಮದೇನೇ, ನಿಮ್ಮ ಪೂಜೆ ಹೂವು ನಾನೇ
ಈ ನಿಮ್ಮ ಪಾದದಾಣೇs....,
ಈ ನಿಮ್ಮ ಪಾದದಾಣೆ
ನಿಮಗಿಂತಾ ದ್ಯಾವ್ರೆ ಕಾಣೇs...
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ ದಿನವು ನಿತ್ಯ ಉಗಾದಿನೇ
ನನ್ನ ನಿಮ್ಮಾ ಪಾಲಿಗೇ,
ನನ್ನಾ ನಿನ್ನಾ ಪಾಲಿಗೇ.

ಚಿತ್ರ: ದೂರದಬೆಟ್ಟ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲಾ

Tag: Preetine Aa Dyavru tanda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ