ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು


ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪ ಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.

ಸಾಹಿತ್ಯ: ಹುಯಿಲಗೋಳ ನಾರಾಯಣ ರಾಯರು


ಕಾಮೆಂಟ್‌ಗಳು

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಈ ಪದ್ಯದ ಸಾರಾಂಶ ಬೇಕು

    ಪ್ರತ್ಯುತ್ತರಅಳಿಸಿ
  3. ಉದಯವಾಗಲಿ ಚೆಲುವ ಕನ್ನಡನಾಡು ಪದ್ಯದ ಸಾರಾಂಶ ಬೇಕು ದಯವಿಟ್ಟು ಅಪ್ಲೋಡ್ ಮಾಡಿ

    ಪ್ರತ್ಯುತ್ತರಅಳಿಸಿ
  4. ಉದಾಯವಾಗಲಿ ನಮ್ಮ ಚಲು ವ ಕನ್ನಡ ನಾಡು ಪದ್ಯದ ಸಾರಾಂಶ

    ಪ್ರತ್ಯುತ್ತರಅಳಿಸಿ
  5. ಉದಯವಾಗಲಿ ಚೆಲುವ ಕನ್ನಡ ನಾಡು ಪದ್ಯದ ಸಾರಾಂಶ ಬೇಕು please

    ಪ್ರತ್ಯುತ್ತರಅಳಿಸಿ
  6. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಪಧ್ಯದ ಸಾರಾಂಶ ಬೇಕು please

    ಪ್ರತ್ಯುತ್ತರಅಳಿಸಿ
  7. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಪದ್ಯದ ಸಾರಾಂಶ plz send

    ಪ್ರತ್ಯುತ್ತರಅಳಿಸಿ
  8. ಉದಯ್ ವಾಗಲಿ ನಮ್ಮ ಚೆಲುವ ಕನ್ನಡ ನಾಡು ಪದ್ಯ ಸಾರಾಂಶ pls send me

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ