ಜೋ ಜೋ ಲಾಲಿ ನಾ ಹಾಡುವೆ
ಜೋ ಜೋ ಲಾಲಿ ನಾ ಹಾಡುವೆ
ಚಿನ್ನಾ ನಿನ್ನಾ ಮುದ್ದಾಡುವೆ
ಹೂವಂತ ಕನಸು ತಾ ಮೂಡಿ ಬರಲಿ
ನಗುವ ಅಳುವ ಕಣ್ಣಲ್ಲಿ ಇಂದು
ನಿದಿರಾ ದೇವೀ ಬಾ ಮೆಲ್ಲಗೆ
ತಾರೆಯಿಂದಾ ಈ ಭೂಮಿಗೆ
ಸಾವಿರ ರಂಗಿನ ಮಳೆಬಿಲ್ಲಿನ
ಮಾಲೆಯ ಧರಿಸೀ ಬಾ ಇಲ್ಲಿಗೇ
ಚಿನ್ನದ ತೇರಲಿ ಒಲವಿಂದ ಬಂದು
ತಾರೇ ಮುತ್ತು ಕಂದಂಗೆ ಇಂದು.
ಚಿಪ್ಪಿ ಮಡಿಲ ಮುತ್ತಂತೆಯೇ
ದೀಪದೆ ಜ್ಯೋತಿ ಇರುವಂತೆಯೇ
ಕಿರಣದೆ ಕಾಂತಿ ಕುಳಿತಂತೆಯೇ
ಮೊಗ್ಗಲಿ ಸೌರಭ ಇರುವಂತೆಯೇ
ರಾತ್ರಿ ಸೆರಗು ಹಾಸಿರಲಿಂದು
ಮಲಗು ಮಮತೆ ಮಡಿಲಲ್ಲಿ ಬಂದು
ಚಿತ್ರ: ಚಿನ್ನಾ ನಿನ್ನಾ ಮುದ್ದಾಡುವೆ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಸಲೀಲ್ ಚೌಧುರಿ
ಗಾಯನ: ಕೆ. ಜೆ. ಏಸುದಾಸ್
ಕಾಮೆಂಟ್‌ಗಳು