ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನನ್ನದೆಯ ಮಾತೆಲ್ಲ ನೀನಾಡಬೇಕು

ನನ್ನದೆಯ ಮಾತೆಲ್ಲ ನೀನಾಡಬೇಕು
ಆ ನುಡಿಯ ದನಿಯಾಗಿ ನಾ ಬಾಳಬೇಕು
ನಾ ಬಾಳಬೇಕು
ನನ್ನದೆಯ ಮಾತೆಲ್ಲ ನೀನಾಡಬೇಕು
ಆ ನುಡಿಯ ದನಿಯಾಗಿ ನಾ ಬಾಳಬೇಕು
ನಾ ಬಾಳಬೇಕು
ಪ್ರೇಮಾನುರಾಗವೇ ಉಸಿರಾಗಬೇಕು
ಉಸಿರಾಗಬೇಕು
ಒಂದಾಗಿ ಮೈಮರೆತು ಓಲಾಡಬೇಕು
ಓಲಾಡಬೇಕು
ನನ್ನದೆಯ ಮಾತೆಲ್ಲ ನೀನಾಡಬೇಕು
ಆ ನುಡಿಯ ದನಿಯಾಗಿ ನಾ ಬಾಳಬೇಕು
ನಾ ಬಾಳಬೇಕು

ನೀ ನೋಡೋ ನೋಟಕ್ಕೆ ಕಣ್ಣಾಗಬೇಕು
ಕಣ್ಣಾಗಬೇಕು
ಚೆಂದುಟಿಯ ಕಿರುನಗೆಯೇ ನಾನಾಗಬೇಕು
ನಾನಾಗಬೇಕು
ನೀ ಹಾಡೋ ಗೀತೆಯು ನಾನಾಗಬೇಕು
ನಾನಾಗಬೇಕು
ನಿನ್ನಲ್ಲಿ ನಾನಾಗಿ ಮೈಮರೆಯಬೇಕು
ಮೈಮರೆಯಬೇಕು
ನನ್ನದೆಯ ಮಾತೆಲ್ಲ ನೀನಾಡಬೇಕು
ಆ ನುಡಿಯ ದನಿಯಾಗಿ ನಾ ಬಾಳಬೇಕು
ನಾ ಬಾಳಬೇಕು

ನಾನೊಂದು ಹೂವಾಗಿ ತೂಗಡಬೇಕು
ತೂಗಾಡಬೇಕು
ಆ ಹೂವ ಪರಿಮಳವು ನೀನಾಗಬೇಕು
ನೀನಾಗಬೇಕು
ನೀನೊಂದು ಗಿಳಿಯಾಗಿ ಹಾರಾಡಬೇಕು
ಹಾರಾಡಬೇಕು
ಹಸಿರಾಗಿ ಒಡಲೆಲ್ಲ ನಾ ತುಂಬಬೇಕು
ನಾ ತುಂಬಬೇಕು
ನನ್ನದೆಯ ಮಾತೆಲ್ಲ ನೀನಾಡಬೇಕು
ಆ ನುಡಿಯ ದನಿಯಾಗಿ ನಾ ಬಾಳಬೇಕು
ನಾ ಬಾಳಬೇಕು

ಚಿತ್ರ: ಭಲೇಭಾಸ್ಕರ
ಸಾಹಿತ್ಯ. ಚಿ. ಉದಯಶಂಕರ
ಸಂಗೀತ: ಸತ್ಯಂ
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ

 Tag: Nannedeya Maatella 




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ