ಬಾನಲ್ಲಿ ಓಡೋ ಮೇಘ
ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೆ ಯೋಗ
ಎಲ್ಲುಂಟು ಒಲವಿರದ ಜಾಗ
ಬಾಬಾ ಗೆಳೆಯಾ ಬೇಗ
ಮುಗಿಲೊಂದು ಮನಸಿನ ಬಿಂಬಾ
ಮುತ್ತಿನಾ ಮಣಿಗಳೇ ತುಂಬಾ
ಎಲ್ಲೋ ದೊರದ ಚುಕ್ಕೀ
ಅದರತ್ತ ಗಿರಿಮುಗಿಲಾ ಹಕ್ಕಿ
ಓ ಮಣ್ಣಲ್ಲಿ ತಾ ಬೇರೂರಿ
ನೆಲತಾಯ ಮೊಲೆಹಾಲ ಹೀರಿ
ಹಸುರಾಗೀ ನಿಂತೀ ಬಾಳು
ಹೇ ಗಾಳಿ ನಿನಗೆ ಸವಾಲೂ
ಬಾನಲ್ಲಿ ಓಡಿದರು ಮೇಘಾ
ಮಳೆಗೂ ಮಣ್ಣಲ್ಲೇ ಜಾಗ
ಅಲ್ಲಿಗೂ ಇಲ್ಲಿಗೂ ಸೇತು
ಮೌನ ಮೌನದಾ ನಡುವೇ ಮಾತು
ಚಿತ್ರ:
ಅಮೆರಿಕ ಅಮೆರಿಕ
ಸಾಹಿತ್ಯ:
ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ:
ಮನೋಮೂರ್ತಿ
ಹಾಡಿದವರು:
ರಾಜೇಶ್, ಸಂಗೀತ ಕಟ್ಟಿ, ರಮೇಶ್ ಚಂದ್ರ
Tag: Banalli Odo Megha
ಕಾಮೆಂಟ್‌ಗಳು