ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಿಂದೂಸ್ಥಾನವು

ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ಜನ್ಮಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ ಕನ್ನಡ ನುಡಿಯ ಗುಡಿಯಲ್ಲಿ

ದೇಶ ಭಕ್ತಿಯ ಬಿಸಿ ಬಿಸಿ ನೆತ್ತರು ಧಮನಿ ಧಮನಿಯಲಿ ತುಂಬಿರಲಿ
ವಿಶ್ವಪ್ರೇಮದ  ಶಾಂತಿಮಂತ್ರದ ಘೋಷವ ಎಲ್ಲೆಡೆ ಮೊಳಗಿಸಲಿ
ಸಕಲಧರ್ಮದ ಸತ್ವ ಸಮನ್ವಯ ಸತ್ವ ಜ್ಯೋತಿಯ ಬೆಳಗಿಸಲಿ

ಕನ್ನಡ ತಾಯಿಯ ಕೋಮಲ ಹೃದಯದ ಭವ್ಯಶಾಸನ ಬರೆಯಿಸಲಿ
ಕನ್ನಡನಾಡಿನ ಎದೆ ಎದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ
ಈ ಮಣ್ಣಿನ ಪುಣ್ಯದ ದಿವ್ಯಚರಿತ್ರೆಯ ಕಲ್ಲು ಕಲ್ಲಿನಲು ಕೆತ್ತಿಸಲಿ

 ಚಿತ್ರ: ಅಮೃತ ಘಳಿಗೆ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ವಿಜಯಭಾಸ್ಕರ್
ಗಾಯನ: ಜಯಚಂದ್ರನ್



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ