ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
ಸೂರ್ಯಂಗು
ಚಂದ್ರಂಗು ಬಂದಾರೆ ಮುನಿಸು
ನಗ್ತಾದ
ಭೂತಾಯಿ ಮನಸು
ರಾಜಂಗೂ
ರಾಣೀಗೂ ಮುರಿದೋದ್ರೆ ಮನಸು
ಅರಮನೆಯಾಗೇನೈತೆ ಸೊಗಸು,
ಅರಮನೆಯಾಗೇನೈತೆ ಸೊಗಸು.
ಮನೆತುಂಬ
ಅರಿದೈತೆ ಕೆನೆಹಾಲು ಮೊಸರು
ಎದೆಯಾಗೆ
ಬೆರೆತೈತೆ ಬ್ಯಾಸರದಾ ಉಸಿರು,
ಗುಡಿಯಾಗೆ
ಬೆಳಗೈತೆ ತುಪ್ಪಾದ ದೀಪ
ನುಡಿಯಾಗೆ
ನಡೆಯಾಗೆ ಸಿಡಿದೈತೆ ಕ್ವಾಪ, ಸಿಡಿದೈತೆ ಕ್ವಾಪ
ಬೆಳದಿಂಗಳು
ಚೆಲ್ಲೈತೆ ಅಂಗಳದಾ ಒರಗೇ
ಕರಿಮೋಡ
ಮುಸುಕೈತೆ ಮನಸಿನಾ ಒಳಗೇ
ಬಯಲಾಗೆ
ತುಳುಕೈತೆ ಹರುಸದಾ ಒನಲು
ಪ್ರೀತಿಯಾ
ತೇರಿಗೇ ಬಡಿದೈತೆ ಸಿಡಿಲು,ಬಡಿದೈತೆ ಸಿಡಿಲು
ಮುಂಬಾಗಿಲ
ರಂಗೋಲಿ ಮಲಗೈತೇ ಆಯಾಗೀ
ಕಿರುನಗೆಯ
ಮುಖವೆಲ್ಲ ಮುದುಡೈತೆ ಸೊರಗೀ
ಆನಂದ
ಸಂತೋಸ ಈ ಮನೆಗೆ ಬರಲೀ
ಬೇಡುವೆನು
ಕೈಮುಗಿದು ಆ ನನ್ನ ಸಿವನಾ, ಆ ನನ್ನ ಸಿವನಾ
ಚಿತ್ರ:
ಶುಭಮಂಗಳ
ಸಾಹಿತ್ಯ:
ಎಂ.ಎನ್. ವ್ಯಾಸರಾವ್
ಸಂಗೀತ:
ವಿಜಯಭಾಸ್ಕರ್
ಗಾಯನ:
ರವಿ (ಕೆ. ಎಸ್. ಎಲ್. ಸ್ವಾಮಿ)
Tag: Suryangu Chandrangu Bandare Munisu
ಕಾಮೆಂಟ್‌ಗಳು