ಶಿವನಹೊತ್ತ ಶಿವಭಕ್ತ ನಂದೀಶ
ಶಿವನಹೊತ್ತ ಶಿವಭಕ್ತ ನಂದೀಶ
ಶರಣು ಶರಣು ನೀ ನೀಡು ಸಂತೋಷ
ಜಗದ ಜನರ ಮನಕೆ ಕೊಡಲು ಸುಖ ಶಾಂತಿ
ಭುವಿಗೆ ನೀನು ಬಂದ ದಿನವೇ ಸಂಕ್ರಾಂತಿ
ಮಹಾ ಸಂಕ್ರಾಂತಿ
ಕಾಯಕವೇ ಕೈಲಾಸಕೆ ದಾರಿ ಎಂದೂ
ಬಸವ ಹೊತ್ತ ದುಡಿಮೆ ಎತ್ತು ಆದೇ ಇಂದು
ಮಾತು ಬಲ್ಲ ಮಾನವನ ನೀತಿಯ ಕಂಡೂ
ಮೂಖನಾಗಿ ಕರ್ಮಯೋಗಿ ಆದೆಯೋ ಎಂದು
ನೀ ತಣಿಯೇ ಕೈಲಾಸದಿ ಹರನು ಕುಣಿಯುವಾ
ನೀ ನಲಿಯೇ ಆನಂದದಿ ಹರನು ಒಲಿಯುವಾ
ಭೂಮಿಗೆಲ್ಲ ಅನ್ನದಾತ ನೀನಣ್ಣಾ
ಹೂವಿನಂತ ಮನದವನೇ ಬಸವಣ್ಣ
ಚಿತ್ರ: ಅನುಗ್ರಹ
ಸಾಹಿತ್ಯ: ಸೋರಟ್ ಅಶ್ವಥ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಪಿ. ಸುಶೀಲ
Tag: Shivanahotta Shiva Bhakta
ಕಾಮೆಂಟ್‌ಗಳು