ಹನಿ ಹನಿಗೂಡದ್ರೆ ಹಳ್ಳ
ಹನಿ ಹನಿಗೂಡದ್ರೆ ಹಳ್ಳ
ತೆನೆ ತೆನೆಗೂಡದ್ರೆ ಬಳ್ಳ
ಹನಿ ಹನಿಗೂಡದ್ರೆ ಹಳ್ಳ
ತೆನೆ ತೆನೆಗೂಡದ್ರೆ ಬಳ್ಳ
ದೊಡ್ಡೋರ್ ಹೇಳೋ ಮಾತೆಲ್ಲಾ
ಸುಳ್ಳಲ್ಲಾ ಕಣಣ್ಣಾ
ಜಾಣ ಕೇಳಣ್ಣಾ
ಹತ್ತು ಕಟ್ಟೋ ಬದ್ಲು ಒಂದು ಮುತ್ತು
ಕಟ್ಟಿ ನೋಡು
ಹತ್ತೂ ಕಟ್ಟೋ ಬದ್ಲು ಒಂದು ಮುತ್ತೂ
ಕಟ್ಟಿ ನೋಡು
ಕೇಳೋ ಗಾದೇ ಈ ಮಾತು ಬಾಳೋ ಇಂಗೇ
ಯಾವತ್ತೂ
ಇಂಗೇ ಯಾವತ್ತೂ
ಏ ಗಪೂರೂ, ಅಡ ಇಡೋವ್ರಲ್ಲಾ ಯಂಗವ್ರೇ?
ಸಾಲ ಗೀಲ ಅಂತ ಕೇಳ್ದರೇ
ಗದ್ದೇ ಮನೆ ಮಡುಗೂ ಅಂತಾರೇ
ಬಡ್ಡೀ ಚಕ್ರಬಡ್ಡಿ ಏರಿಸೀ
ಸಾಲಕೊಟ್ಟೂ ಶೂಲ ಹಾಕುತಾರೆ
ಸಾಲಕೊಟ್ಟೂ ಶೂಲ ಹಾಕುತಾರೆ
ಸಾಲ ಗೀಲ ಅಂತ ಕೇಳ್ದರೇ
ಗದ್ದೇ ಮನೆ ಮಡುಗೂ ಅಂತಾರೇ
ಅಂತಾರೇ...
ಬಡ್ಡೀ ಚಕ್ರಬಡ್ಡಿ ಏರಿಸೀ
ಸಾಲಕೊಟ್ಟೂ ಶೂಲ ಹಾಕುತಾರೆ
ಸಾಲಕೊಟ್ಟೂ ಶೂಲ ಹಾಕುತಾರೆ
ಓಹೋ, ಸಾಲಾ ಕೋಟ್ಟೂ ಶೂಲಾ ಹಾಕುತಾರೆ
ಹಣ ಇರೋವ್ರೆಲ್ಲಾ ಎಂಗಿರ್ಬೇಕು?
ರಾಸಿ ರೊಕ್ಕಾ ಇರೋರೆಲ್ಲಾ
ರಾಚೂಟಪ್ನಂಗಿರಬೇಕು
ರಾಸಿ ರೊಕ್ಕಾ ಇರೋರೆಲ್ಲಾ
ರಾಚೂಟಪ್ನಂಗಿರಬೇಕು
ರಾಸಿ ರೊಕ್ಕಾ ಇರೋರೆಲ್ಲಾ
ರಾಚೂಟಪ್ನಂಗಿರಬೇಕು
ತದ್ದಿನದಿ ದಿನದಿ ತದ್ದಿನದಿ
ದಿನದಿ ತದಿನ ತದಿನ ತದಿನ ತದ್ದು
ಹನಿ ಹನಿಗೂಡದ್ರೆ ಹಳ್ಳ
ತೆನೆ ತೆನೆಗೂಡದ್ರೆ ಬಳ್ಳ
ಹನಿ ಹನಿಗೂಡದ್ರೆ ಹಳ್ಳ
ತೆನೆ ತೆನೆಗೂಡದ್ರೆ ಬಳ್ಳ
ದೊಡ್ಡೋರ್ ಹೇಳೋ ಮಾತೆಲ್ಲಾ
ಸುಳ್ಳಲ್ಲಾ ಕಣಣ್ಣಾ
ಜಾಣ ಕೇಳಣ್ಣಾ
ಸುವ್ವೀ ಸುವ್ವಮ್ಮ ಲಾಲಿ, ಸುವ್ವಲಾಲೀ
ಜಾಣೇ, ಜಗಾರ್ದ ಹೆಣ್ಣೇ ಸುವ್ವಲಾಲೀ
ಸುವ್ವೀ ಸುವ್ವಮ್ಮ ಲಾಲಿ, ಸುವ್ವಲಾಲೀ
ಜಾಣೇ, ಜಗಾರ್ದ ಹೆಣ್ಣೇ ಸುವ್ವಲಾಲೀ
ಸುವ್ವೀ ಸುವ್ವಮ್ಮ ಲಾಲಿ ಸುವ್ವಲಾಲೀ,
ಸುವ್ವೀ ಸುವ್ವಮ್ಮ ಲಾಲಿ ಸುವ್ವಲಾಲೀ
ಜಾಣೇ ಜಗಾರ್ದ ಹೆಣ್ಣೇ ಸುವ್ವಲಾಲೀ
ಸುವ್ವೀ ಸುವ್ವಮ್ಮ ಲಾಲಿ, ಸುವ್ವೀ
ಸುವ್ವಮ್ಮ ಲಾಲೀ
ಸುವ್ವೀ ಸುವ್ವಮ್ಮ ಲಾಲೀ, ಸುವ್ವೀ
ಸುವ್ವಮ್ಮ ಲಾಲೀ
ಸುವ್ವೀ ಸುವ್ವಮ್ಮ ಲಾಲೀ
ಓದ್ದ್ದೋರು ಎಷ್ಟೋ ಮಂದಿ ಹಳ್ಳೀಲ್
ಹುಟ್ದವರೇ
ಈ ಹಳ್ಳೀಲ್ ಬೆಳೆದವರೇ
ಓದ್ದ್ದೋರು ಎಷ್ಟೋ ಮಂದಿ ಹಳ್ಳೀಲ್
ಹುಟ್ದವರೇ
ಈ ಹಳ್ಳೀಲ್ ಬೆಳೆದವರೇ
ಆದ್ರೂನೂ ಸೋಕಿ ಕಲ್ತು
ಆದ್ರೂನೂ ಸೋಕಿ ಕಲ್ತು, ಹಳ್ಳೀನ್
ಮರ್ತವ್ರೇ
ಈ ಹಳ್ಳೀನ್ ಮರ್ತವರೇ. ಆ ಪಟ್ನಾ ಸೇರವ್ರೇ
ಆ ಪಟ್ನಾ ಸೇರವ್ರೇ..
ಮಣ್ಣಾ ಬಂಗಾರದಂತ ಬುದ್ಧೀ ಬಲದಿಂದ
ಮಣ್ಣಾ ಬಂಗಾರದಂತ ಬುದ್ಧೀ ಬಲದಿಂದ
ಪ್ರೀತಿ ಇರುವೊರೇ ಇತ್ತ ಈ ಹಳ್ಳೀನ್
ಕಂಡಾಗ
ಈ ಹಳ್ಳೀನ್ ಕಂಡಾಗ
ಉರಿಯೋ ಸೂರ್ಯ ಒಬ್ಬ ಸಾಕು
ಭೂಮೀನ್ ಬೆಳಗೋಕೆ
ಈ ಭೂಮೀನ್ ಬೆಳಗೋಕೇ
ರಾಜೀವ ಒಬ್ಬಾ ಸಾಕು,
ರಾಜೀವ ಒಬ್ಬಾ ಸಾಕು, ಹಳ್ಳೀನ್ ಬೆಳಗೋಕೇ
ಈ ಹಳ್ಳೀನ್ ಬೆಳಗೋಕೇ
ತನಂ ತನಂ ತನಂ ತನಂ
ತನಂತ ನನಂತ ನನಂತ ನನನನ ತದ್ದೂ...
ಪೊಳ್ಳು ಜಗಳ ಬೇಡ ಹಳ್ಳಿಲೀ
ಪೊಳ್ಳು ಜಗಳ ಬೇಡ ಹಳ್ಳಿಲೀ
ಒಂದಾಗಿ ನಾವು ಉತ್ತಾಗ ಸಿರಿ ಇದೆ
ಕೈಯಲ್ಲೀ
ಸಿರಿ ಇದೆ ಕೈಯಲ್ಲೀ, ಸಿರಿ ಇದೆ
ಕೈಯಲ್ಲೀ
ಈ ನಾಡ ಪ್ರಾಣಾ ಹಳ್ಳೀಲೀ
ಹೌದೂ
ಈ ನಾಡ ಪ್ರಾಣಾ ಹಳ್ಲೀಲಿ
ಬೆಳೆಸೋಣ ಸಹಕಾರ ನಮ್ಮಲ್ಲೀ... ಹೊಯ್
ಬೆಳೆಸೋಣ ಸಹಕಾರ ನಮ್ಮಲ್ಲಿ,
ಬೆಳೆಸೋಣ ಸಹಕಾರ ನಮ್ಮಲೀ
ಬೆಳೆಸೋಣ ಸಹಕಾರ ನಮ್ಮಲ್ಲಿ,
ಬೆಳೆಸೋಣ ಸಹಕಾರ ನಮ್ಮಲೀ
ಎಲ್ಲಾರೂ ಕೂಡೀ ಬಾಳೋಣಾ
ಹೊಸ ಬಾಳ ನಾಂದೀ ಹಾಡೋಣಾ
ಎಲ್ಲಾರೂ ಕೂಡೀ ಬಾಳೋಣ
ಹೊಸ ಬಾಳ ನಾಂದೀ ಹಾಡೋಣಾ
ಹೊಯ್
ಎಲ್ಲಾರೂ ಕೂಡೀ ಬಾಳೋಣ
ಹೊಸ ಬಾಳ ನಾಂದೀ ಹಾಡೋಣಾ
ಕೋಲು ಕೋಲಣ್ಣ ಕೋಲೆ
ಕೋಲೂ ಕೋಲಣ್ಣ ಕೋಲೆ
ಕೋಲು ಕೋಲಣ್ಣ ಕೋಲೆ
ಕೋಲೂ ಕೋಲಣ್ಣ ಕೋಲೆ
ಕೋಲು ಕೋಲಣ್ಣ ಕೋಲೆ
ಸುವ್ವೀ ಸುವ್ವಮ್ಮ ಲಾಲೀ
ಕೋಲು ಕೋಲಣ್ಣ ಕೋಲೆ
ಸುವ್ವೀ ಸುವ್ವಮ್ಮ ಲಾಲೀ
ಚಿತ್ರ ಬಂಗಾರದ ಮನುಷ್ಯ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಜಿ. ಕೇ. ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್, ಪಿ.
ಸುಶೀಲ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಟಿ. ಎ. ಮೋತಿ ಮತ್ತು ಸಂಗಡಿಗರು
Tag: Hani Hanigoodidre halla
ಕಾಮೆಂಟ್‌ಗಳು