ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ


ಸುಂದರ ದಿನ ಸುಂದರ ಇನ
ಸುಂದರ ವನ ನೋಡು ಬಾ
ಎಳೆ ಬಿಸಿಲೊಳು ತಿಳಿಗೊಳದೊಳು
ಜಲದಲೆಗಳು ನಲಿನಲಿಯಲು
ನೋಡು ಬಾ | ಕೂಡು ಬಾ!
ಬೇಗ ಬಾ | ಬಾ! ಬಾ!

ತಣ್ಣೆಲರಲಿ ಹೂಗಳ ಬಳಿ
ಸೊಕ್ಕಿದ ಅಳಿ ನೋಡು ಬಾ
ಹೊಸ ತಳಿರೊಳು ಇಂಗೊರಳೊಲು
ಕೋಗಿಲೆಗಳು ಸ್ವರಗೈಯಲು
ಹಾಡು ಬಾ| ಕೂಡು ಬಾ!
ಬೇಗ ಬಾ| ಬಾ! ಬಾ!

ಜೊತೆ ಇಲ್ಲದೆ ನನ್ನೊಲಿದೆದೆ
ಕಂಪಿಸುತಿದೆ ಕೂಡು ಬಾ
ಹೊಸ ಹಸುರೆಡೆ ತಿಳಿಗೊಳದೆಡೆ
ನಾ ನಿನ್ನೆಡೆ ನೀ ನನ್ನೆಡೆ
ಹಾಡು ಬಾ| ಕೂಡು ಬಾ!
ಬೇಗ ಬಾ| ಬಾ! ಬಾ!

ಸಾಹಿತ್ಯ: ಕುವೆಂಪು



Tag: Sundara Dina, Sundra Ina, Sundra Bana

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ