ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ



ಓಡಿ ಬಾರಯ್ಯ ವೈಕುಂಠಪತಿ ನಿನ್ನ 
ನೋಡುವೆ ಮನದಣಿಯ

ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ
ಪಾಡಿ ಪೊಗಳುವೆನು ಪರಮ ಪುರುಷ ಹರಿ



ಕೆಂದಾವರೆಯಂತೆ ಪಾದಂಗಳು ರಂಗ
ಚಂದದಿ ಧಿಮಿಧಿಮಿ ಕುಣಿಯುತಲಿ
ಅಂದುಗೆ ಗೆಜ್ಜೆಯಿಂ ನಲಿಯುತ ಬಾರೋ
ಅರವಿಂದ ನಯನ ಗೋವಿಂದ ನೀ ಬಾರೋ

ಕೋಟಿ ಸೂರ್ಯ ಪ್ರಭಾ ಕಾಂತಿಗಳಿಂದ
ಕಿರೀಟ ಕುಂಡಲ ಬಾವುಲಿ ಹೊಳೆಯೆ
ಲಲಾಟ ಕಸ್ತೂರಿ ತಿಲಕವಿಡುವೆ ರಂಗ
ಕೂಟ ಗೋಪಾಲರ ಆಟ ಸಾಕೋ ಈಗ

ಮಂಗಳಾತ್ಮಕ ಮೋಹನಕಾಯನೆ
ಸಂಗೀತಲೋಲ ಸದ್ಗುಣಶೀಲ
ಅಂಗನೆ ಲಕುಮಿ ಸಹಿತವಾಗಿ ಬಂದೆನ್ನ
ಅಂಗಳದೊಳಗಾಡೊ ಪುರಂದರ ವಿಠಲ

                                          ಸಾಹಿತ್ಯ: ಪುರಂದರದಾಸರು


Tag: Odi Baarayya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ