ಇನ್ನೂ ದಯ ಬಾರದೇ ದಾಸನ ಮೇಲೆ
ಇನ್ನೂ ದಯ ಬಾರದೇ ದಾಸನ ಮೇಲೆ
ಪನ್ನಗ ಶಯನ ಶ್ರೀ ಪರಮ ಪುರುಷ ಹರಿಯೇ
ಇನ್ನೂ ದಯ
ಬಾರದೇ, ದಾಸನ ಮೇಲೆ...
ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ
ನಾನಾ ಯೋನಿಗಳಲ್ಲಿ ನಲಿದು ಹುಟ್ಟೀ
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೆ ಗತಿ ಎಂದು ನಂಬಿದ ದಾಸನ ಮೇಲೆ
ಇನ್ನೂ ದಯ ಬಾರದೇ ದಾಸನ ಮೇಲೆ
ಮನೋವಾಕ್ಕಾಯದಿಂದ ಮಾಡಿದ ಕರ್ಮಗಳೆಲ್ಲ
ದಾನವಾಂತಕ ನಿನ್ನಾ ಅಧೀನವಲ್ತೇ...
ಏನು ಮಾಡಿದರೇನು ಪ್ರಾಣ ನಿನ್ನದು
ಸ್ವಾಮಿ
ಶ್ರೀನಾಥ ಪುರಂದರ ವಿಠಲ ನಿನ್ನ ದಾಸನ
ಮೇಲೆ –
ಇನ್ನೂ ದಯ ಬಾರದೇ ದಾಸನ ಮೇಲೆ
ಸಾಹಿತ್ಯ: ಪುರಂದರದಾಸರು
ಗಾಯನ: ಮುಂಬೈ ಸಹೋದರಿಯರು
Tag: Innoo daya barade
ನಾನಾ ಯೋನಿಗಳಲ್ಲಿ ನಲಿದು ಹುಟ್ಟೀ - Edu "Nalidu" alla...it should be "Beledu"
ಪ್ರತ್ಯುತ್ತರಅಳಿಸಿ