ನಾರಾಯಣ ತೇ ನಮೋ ನಮೋ ಭವ
ನಾರಾಯಣ
ತೇ ನಮೋ ನಮೋ ಭವ
ನಾರದ ಸನ್ನುತ ನಮೋ ನಮೋ
ಮುರಹರ ನಗಧರ ಮುಕುಂದ ಮಾಧವ
ಗರುಡ ಗಮನ ಪಂಕಜನಾಭ
ಪರಮ ಪುರುಷ ಭವಭಂಜನ ಕೇಶವ
ನರ ಮೃಗ ಶರೀರ ನಮೋ ನಮೋ
ಜಲಧಿ ಶಯನ ರವಿಚಂದ್ರ ವಿಲೋಚನ
ಜಲರುಹ ಭವನುತ ಚರಣಯುಗ
ಬಲಿಭಂಜನ ಗೋಪೀಜನ ವಲ್ಲಭ
ನಳಿನೋಧರ ತೇ ನಮೋ ನಮೋ
ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನ ರೂಪ
ವೇದೋದ್ಧಾರ ಶ್ರೀ ವೇಂಕಟನಾಯಕ ಪು
ರಂದರ
ವಿಠಲ ನಮೋ ನಮೋ
ಸಾಹಿತ್ಯ:
ಪುರಂದರದಾಸರು
ಗಾಯನ:
ಟಿ. ಎಸ್. ಸತ್ಯವತಿ
Tag: Narayana Te Namo Namo
ಕಾಮೆಂಟ್‌ಗಳು