ಧನರಾಜ್ ಪಿಳ್ಳೈ
ಧನರಾಜ್ ಪಿಳ್ಳೈ
ಧನರಾಜ್ ಪಿಳ್ಳೈ ಭಾರತದ ಅತ್ಯುತ್ತಮ ಹಾಕಿಪಟುಗಳಲ್ಲಿ ಒಬ್ಬರು. ನಾಲ್ಕು ಒಲಿಂಪಿಕ್ಸ್, ನಾಲ್ಕು ವಿಶ್ವಕಪ್, ನಾಲ್ಕು ಚಾಂಪಿಯನ್ಸ್ ಟ್ರೋಫಿಗಳಲ್ಲಿ , ನಾಲ್ಕು ಏಷ್ಯನ್ ಗೇಮ್ಸ್ ಕೂಟಗಳಲ್ಲಿ ಆಡಿದ ಅಪರೂಪದ ಆಟಗಾರ ಅವರು.
ಧನರಾಜ್ ಪಿಳ್ಳೈ ಮಹಾರಾಷ್ಟ್ರದ ಕಿರ್ಕೆ ಎಂಬಲ್ಲಿ 1968ರ ಜುಲೈ 16ರಂದು ಜನಿಸಿದರು. ಎಂಭತ್ತರ ದಶಕದ ಮಧ್ಯಭಾಗದಲ್ಲಿ ಮುಂಬಯಿಗೆ ಬಂದು ಹಾಕಿ ಕ್ಷೇತ್ರಕ್ಕೆ ಪಾದಾರ್ಪಣ ಮಾಡಿದರು.
ಧನರಾಜ್ ಪಿಳ್ಳೈ ಅವರ ನಾಯಕತ್ವದಲ್ಲಿ ಭಾರತದ ಹಾಕಿ ತಂಡವು ಏಷ್ಯನ್ ಗೇಮ್ಸ್ (1998), ಏಷ್ಯಾ ಕಪ್ (2003) ಜಯಗಳಿಸಿತು. ಬ್ಯಾಂಕಾಕ್ ಏಷ್ಯನ್ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಾಗಿದ್ದ ಅವರು ವಿಶ್ವ ಹನ್ನೊಂದು ತಂಡದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ (1994).
ಸುದೀರ್ಘ 15 ವರ್ಷಗಳ ಅಂತರರಾಷ್ಟ್ರೀಯ ಮಟ್ಟದ ಸಾಮರ್ಥ್ಯ ಕಾಪಾಡಿಕೊಂಡು 339 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿ 170ಕ್ಕೂ ಹೆಚ್ವು ಗೋಲು ಗಳಿಸಿದ ಸಾಧನೆ ಪಿಳ್ಳೈ ಅವರದ್ದು.
ಧನರಾಜ್ ಪಿಳ್ಳೈ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
On the birth day of great hockey player Dhanaraj Pillai
ಕಾಮೆಂಟ್‌ಗಳು