ಶಿಲ್ಪಾ ಜೋಶಿ
ಶಿಲ್ಪಾ ಜೋಶಿ
ಇಂದು ಫೇಸ್ಬುಕ್ಕಿನಲ್ಲಿ ನಮ್ಮೆಲ್ಲರ ಆತ್ಮೀಯರಾದ ಶಿಲ್ಪಾ ಜೋಶಿ ಅವರ ಹುಟ್ಟು ಹಬ್ಬ.
ಶಿಲ್ಪಾ ಅವರ ಪ್ರತಿಭೆ ನನಗೆ ಮೊದಲು ಗಮನ ಸೆಳೆದದ್ದು ಅವರು ಹಲವು ಕವನಗಳನ್ನು ದೃಶ್ಯಮಾಧ್ಯಮದ ಮೂಲಕ ಸಂಯೋಜಿಸಿ ವಾಚಿಸಿದ್ದರಲ್ಲಿ. ಅವರ ನಿರೂಪಣೆ, ಅವರ ಭಾಷಾ ಉಚ್ಚಾರದಲ್ಲಿನ ಸ್ಪಷ್ಟತೆ ಮತ್ತು ಅವರ ಪ್ರಸ್ತುತಿಗಳಲ್ಲಿನ ಹರಿವು, ಅವರು ಓದುವ ಕಾವ್ಯಕ್ಕೊಂದು ವಿಶೇಷತೆ ತಂದುಕೊಡುವುದರ ಜೊತೆಗೆ, ಕಾವ್ಯದ ಆಳವನ್ನರಸುವುದರಲ್ಲಿ ಒಂದು ಚೆಲುವಿದೆ ಎಂಬುದನ್ನು ನಮಗೆ ಮನದಟ್ಟು ಮಾಡಿಕೊಡುತ್ತದೆ.
ಹೀಗೆ ಮೊದಲು ನನಗೆ ಗಮನಕ್ಕೆ ಬಂದ ಶಿಲ್ಪಾ ಜೋಶಿ ಅವರ ಪ್ರತಿಭೆಯನ್ನು ತಿಳಿಯ ಹೊರಟಾಗ ಅರಿವಾಗಿದ್ದು ಅವರು ರಂಗಭೂಮಿ ಕಲಾವಿದೆ ಎಂದು. ಅವರ ಏಕವ್ಯಕ್ತಿ ರಂಗಪ್ರಯೋಗವಾದ 'ನನ್ನೊಳಗಿನ ಅವಳು' ಹೆಣ್ಣಿನ ಅಂತರಂಗದ ವಿವಿಧ ಒಳನೋಟಗಳನ್ನು ಮೂರು ಪಾತ್ರಗಳಲ್ಲಿ ಕಟ್ಟಿಕೊಡುತ್ತದೆ. ಇದನ್ನು ರಚಿಸಿ ಅಭಿನಯಿಸಿರುವ ಶಿಲ್ಪಾ ಅವರ ಈ ರಂಗಪ್ರಯೋಗ ಹಲವಾರು ಊರುಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವುದರ ಕುರಿತು ಮಾಧ್ಯಮಗಳಲ್ಲಿ ಅನೇಕ ಉತ್ತಮ ಪ್ರತಿಕ್ರಿಯೆಗಳನ್ನು ನಾವು ಕಾಣಬಹುದು.
ಶಿಲ್ಪಾ ಅವರು ಬಹುಮುಖಿಯಾಗಿ ಬದುಕಿನಲ್ಲಿ ತೊಡಗಿಕೊಂಡಿರುವವರು. ವೃತ್ತಿಯಲ್ಲಿ ಅವರು ಆಪ್ತಸಮಾಲೋಚಕರು. ವೀಣಾವಾದನ ಅವರಿಗೆ ಸಂತೋಷ ನೀಡುವ ನಿತ್ಯದ ಪ್ರಕ್ರಿಯೆ. ಅಭಿನಯಿಸುತ್ತಾರೆ, ಬರೆಯುತ್ತಾರೆ, ಕಾರ್ಯಕ್ರಮ ನಿರೂಪಿಸುತ್ತಾರೆ, ತರಬೇತಿ ಕೊಡುತ್ತಾರೆ, ಆಸಕ್ತಿಯಿಂದ ಓದುತ್ತಾರೆ. ಯಕ್ಷಗಾನ ಮತ್ತು ರಂಗಭೂಮಿಯ ಪ್ಯೋಹಗಳನ್ನು ಆಸಕ್ತಿಯಿಂದ ಕುಟುಂಬದೊಂದಿಗೆ ಹೋಗಿ ಅಸ್ವಾದಿಸುತ್ತಾರೆ.
ಮನೆ ಮತ್ತು ವೃತ್ತಿ ನಿರ್ವಹಣೆಗಳೊಂದಿಗೆ ತಮ್ಮ ಆಸಕ್ತಿ ಮತ್ತು ಅಭಿರುಚಿಗಳಿಗೆ ಸಹಾ ಸದಾ ತಮ್ಮನ್ನು ತೆರೆದಿಟ್ಟುಕೊಳ್ಳುವುದನ್ನು ಅವರು ಸಾಧ್ಯ ಮಾಡಿಕೊಂಡಿದ್ದಾರೆ. ಅವರು ತಮ್ಮ ಒಂದು ಪತ್ರಿಕಾ ಲೇಖನದಲ್ಲಿ "ನಾನು ಸಣ್ಣ ಸಣ್ಣ ವಿಷಯದಲ್ಲಿ ಸಂತೋಷವನ್ನು ಹುಡುಕುವವಳು. ಸಣ್ಣ ಖುಷಿಗಳಲ್ಲಿ ಬದುಕಲು ಪ್ರಯತ್ನಿಸುವವಳು" ಎಂದಿದ್ದಾರೆ. ಇದನ್ನು ಓದಿದಾಗ "ದೊಡ್ಡ ಸಾಧನೆ ಸಣ್ಣದನ್ನು ಗುರುತಿಸುವವರೀಗೇ ತಾನೇ” ಅನಿಸೀತು.
ಶಿಲ್ಪಾ ಜೋಶಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Shilpa Joshi 🌷🌷🌷
ಕಾಮೆಂಟ್‌ಗಳು