ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾಲಮಣಿ ಅಮ್ಮ


 ಬಾಲಮಣಿ ಅಮ್ಮ


ಬಾಲಮಣಿ ಅಮ್ಮ ಮಲಯಾಳಂನ ಮಹತ್ವದ ಕವಯತ್ರಿ.

ನಲಪಾಟ್ ಬಾಲಮಣಿ ಅಮ್ಮ 1909ರ ಜುಲೈ 19ರಂದು ಕೇರಳದ ತ್ರಿಸ್ಸೂರು ಜಿಲ್ಲೆಯ ಪುನ್ನಯೂರ್ಕುಲಂ ಎಂಬಲ್ಲಿ ಜನಿಸಿದರು.
ತಂದೆ ಚಿತ್ತಾಂಜೂರ್ ಕುನ್ಹುನ್ನಿ ರಾಜ ಮತ್ತು ತಾಯಿ ನಲಪಾಟ್ ಕೋಚುಕುಟ್ಟಿ ಅಮ್ಮಾ.

ಬಾಲಮಣಿ ಅಮ್ಮ ಯಾವುದೇ ಔಪಚಾರಿಕ ಶಿಕ್ಷಣವನ್ನು ಸ್ವೀಕರಿಸದಿದ್ದರೂ, ತನ್ನ ತಾಯಿಯ ಚಿಕ್ಕಪ್ಪ ಮತ್ತು ಕವಿ ನಲಪಾಟ್ ನಾರಾಯಣ ಮೆನನ್ ಅವರಿಂದ ಪ್ರೇರಿತರಾದರು.  ನಾರಾಯಣ ಮೆನನ್ ಅವರ ಬಳಿಯಿದ್ದ ಅಪಾರ ಪುಸ್ತಕ ಸಂಗ್ರಹಗಳ ನಡುವೆ  ಬಾಲಮಣಿ ಅಮ್ಮ ಬೆಳೆದರು. ನಾರಾಯಣ ಮೆನನ್ ಅವರಲ್ಲದೆ ವಲ್ಲತೋಲ್ ನಾರಾಯಣ ಮೆನನ್ ಅವರ ಸಾಹಿತ್ಯ ಪ್ರಭಾವವೂ ಬಾಲಮಣಿ ಅಮ್ಮ ಅವರಿಗಿತ್ತು. ಬಾಲಮಣಿ ವಿ.ಎಂ. ನಾಯರ್ ಅವರನ್ನು ವಿವಾಹವಾದರು.

ಬಾಲಮಣಿ ಅಮ್ಮ 20 ಕ್ಕೂ ಹೆಚ್ಚು ಕವನ ಸಂಕಲನಗಳನ್ನು, ಹಲವಾರು ಗದ್ಯ ಕೃತಿಗಳನ್ನು, ಮತ್ತು ಅನುವಾದಗಳನ್ನು ಪ್ರಕಟಿಸಿದರು. ಅವರ ಮೊದಲ ಕವಿತೆ 'ಕೂಪ್ಪುಕೈ' 1939ರಲ್ಲಿ ಪ್ರಕಟವಾಯಿತು. ಕೊಚ್ಚಿನ್ ಸಾಮ್ರಾಜ್ಯದ ಮಾಜಿ ಆಡಳಿತಗಾರರಾದ ಪರಿಶಿತ್ ಥಾಂಪುರಾನ್ರಿಂದ  ಸಾಹಿತ್ಯ ನಿಪುಣ ಪುರಸ್ಕಾರ ಸಂದ ನಂತರ ಬಾಲಮಣಿ ಅಮ್ಮ ಅವರ ಕುರಿತು ಹೆಚ್ಚು ಜನರಿಗೆ ತಿಳಿಯಿತು.

ಕುಡುಂಬಿನಿ, ಧರ್ಮಮಾರ್ಗತಲ್, ಸ್ತ್ರೀ ಹೃದಯಂ, ಪ್ರಭಾನ್ಕುರಮ್, ಭಾವನಾಯಲ್, ಊನ್ಜಲಿನ್ಮೆಲ್, ಕಲ್ಲಿಕೋಟ್ಟಾ,  ವೆಲ್ಲಿಚತಿಲ್, ಅವರ್ ಪಾದುನ್ನು, ಪ್ರಾಣಮ್, ಲೋಕಂತರಂಗಲ್ಲ್, ಸೋಪಾನಮ್, ಮುತಾಸ್ಸಿ,  ಮಝುವಿಂಟೆ ಕಥಾ, ಅಂಬಾತಥಿಲೇಕು, ನಾಗರಥಿಲ್, ವೇಯ್ಲಾರಂಬಂಬೋಲ್, ಅಮೃತಂಗಮಯಾ, ಸಂಧ್ಯಾ, ‘ನಿವೇದಯಂ’ (1959ರಿಂದ 1986ರವರೆಗಿನ ಕವಿತೆಗಳ ಸಂಗ್ರಹ), ಮಾಥುರುದಿಯಾಮ್, ಕುಲಕ್ಕಡವಿಲ್ಗೆ ಮುಂತಾದವು ಬಾಲಮಣಿ ಅಮ್ಮ ಅವರ ಬರಹಗಳಲ್ಲಿ ಸೇರಿವೆ.

ಬಾಲಮಣಿ ಅಮ್ಮ ಅವರಿಗೆ ಪದ್ಮಭೂಷಣ, ಸರಸ್ವತಿ ಸಮ್ಮಾನ್,  'ಮುತಾಸ್ಸಿ'ಗಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

ಬಾಲಮಣಿ ಅಮ್ಮ  ಅವರು 2004ರ ಸೆಪ್ಟೆಂಬರ್ 29ರಂದು ನಿಧನರಾದರು.

On the birth anniversary of writer Balamani Amma 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ