ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಶೋಕ್


 ಅಶೋಕ್ 


ಅಶೋಕ್ ಸುರದ್ರೂಪಿ ನಟರಾಗಿ ಮತ್ತು ಚಲನಚಿದ್ಯೋದ್ಯಮದಲ್ಲಿನ ಕಾರ್ಮಿಕ ಸಂಘಟನಾಕಾರರಾಗಿ ಸುದ್ದಿಮಾಡಿದವರು.

ಅಶೋಕ್ 1951ರ ಸೆಪ್ಟೆಂಬರ್ 12ರಂದು ಆನೇಕಲ್ನಲ್ಲಿ  ಜನಿಸಿದರು.  ತಂದೆ ಲಕ್ಷ್ಮಿ ನರಸಿಂಹಯ್ಯ. ತಾಯಿ ಪುಟ್ಟಮ್ಮ.  ತಂದೆ ಲಕ್ಷ್ಮೀ ನರಸಿಂಹಯ್ಯ ವೃತ್ತಿಯಲ್ಲಿ ಪೋಲೀಸ್ ಇನ್ಸಪೆಕ್ಟರ್ ಆಗಿದ್ದರು.

ಅಶೋಕರಿಗೆ ಚಿಕ್ಕಂದಿನಿಂದಲೂ ಚಿತ್ರ ನಟನಾಗುವ ಹಂಬಲವಿತ್ತು. ತಮ್ಮ ಪದವಿ ಶಿಕ್ಷಣವನ್ನು ಪೂರೈಸಿ,  ಮದ್ರಾಸ್ ಫಿಲಂ ಇನ್ಸ್ಟಿಟ್ಯೂಟ್ ಸೇರಿ ನಟನೆಯಲ್ಲಿ ತರಬೇತಿ ಪಡೆದರು.

ಅಶೋಕ್ 1975ರಲ್ಲಿ ತೆರೆ ಕಂಡ ಶ್ರೀನಾಥ್ ನಾಯಕರಾಗಿದ್ದ 'ಹೆಣ್ಣು ಸಂಸಾರದ ಕಣ್ಣು' ಚಿತ್ರದಲ್ಲಿ ನಟಿಸುವುದರ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ಸನಾದಿ ಅಪ್ಪಣ್ಣ ಚಿತ್ರದಲ್ಲಿ ಡಾ.ರಾಜಕುಮಾರ್  ಮಗನ ಪಾತ್ರವನ್ನು ನಿರ್ವಹಿಸಿದರು. ದ್ವಾರಕೀಶ್ ನಿರ್ಮಿಸಿದ 'ಭಾಗ್ಯವಂತರು' ಚಿತ್ರದಲ್ಲಿ ಮತ್ತೊಮ್ಮೆ  ರಾಜಕುಮಾರ್ ಪುತ್ರರಾಗಿ ಅಭಿನಯಿಸಿದರು.

ಮುಂದೆ ಅಶೋಕ್ ಅವರು ದೀಪ, ಗೆದ್ದವಳು ನಾನೇ, ಬಯಲು ದಾರಿ, ರಂಗ ನಾಯಕಿ, ತಾಯಿಯ ಮಡಿಲಲ್ಲಿ, ಗಣೇಶನ ಮಹಿಮೆ, ಕ್ರಾಂತಿಯೋಗಿ ಬಸವಣ್ಣ, ಮುಗಿಲ ಮಲ್ಲಿಗೆ, ತುಂಬಿದ ಮನೆ, ಅರ್ಚನಾ, ತಿರುಪತಿ ಎಕ್ಸ್ ಪ್ರೆಸ್, ಚೆಲ್ಲಿದ ರಕ್ತ, ಅಧ್ಯಕ್ಷ ಇನ್ ಅಮೇರಿಕಾ, ಪಾವನ ಗಂಗಾ, ಜನುಮದ ಜೋಡಿ; ಸುದೀಪ್ ಅಭಿನಯದ ಮಾಣಿಕ್ಯ, ಕೆಂಪೇಗೌಡ, ಮಹಾರಾಜ; ಪುನೀತ್ ರಾಜಕುಮಾರ್ ಅಭಿನಯದ ಅಪ್ಪು, ನಮ್ಮ ಬಸವ, ರಾಜಕುಮಾರ್, ಸೂಪರ್ ಸ್ಟಾರ್;  ಉಪೇಂದ್ರ ಅಭಿನಯದ ಕುಟುಂಬ, ನ್ಯೂಸ್; ದರ್ಶನ್ ಅಭಿನಯದ ಸ್ವಾಮಿ, ಚಕ್ರವರ್ತಿ ಸೇರಿ ಅನೇಕ ಚಿತ್ರಗಳಲ್ಲಿ ನಟ, ನಾಯಕ ನಟ, ಪೋಷಕ ನಟ ಮತ್ತು ಖಳನಾಯಕನ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಶೋಕ್ ಕರ್ನಾಟಕ ಚಲನಚಿತ್ರ ಕಲಾವಿದರು ಮತ್ತು ಕಾರ್ಮಿಕ ವರ್ಗದ ನಾಯಕರಾಗಿ ಕರ್ತವ್ಯ ನಿರ್ವಹಿಸಿದವರು. ಅಂತೆಯೇ ಕನ್ನಡಪರ ಗೋಕಾಕ್ ಚಳುವಳಿ ಮತ್ತು ರೈತಪರ  ಚಳುವಳಿಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು.  ಕಿರುತೆರೆಯಲ್ಲೂ ಅವರು ಪಾತ್ರನಿರ್ವಹಿಸಿದ್ದಾರೆ.

On the birthday of actor Ashok 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ