ಅಭಿನವ್ ಬಿಂದ್ರಾ
ಅಭಿನವ್ ಬಿಂದ್ರಾ
ಭಾರತಕ್ಕೆ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಪ್ರಥಮ ಸ್ವರ್ಣ ಪದಕ ತಂದು ಕೊಟ್ಟವರು ಅಭಿನವ್ ಬಿಂದ್ರಾ.
ಅಭಿನವ್ ಬಿಂದ್ರಾ 1982ರ ಸೆಪ್ಟೆಂಬರ್ 28ರಂದು ಡೆಹ್ರಾಡೂನಿನಲ್ಲಿ ಜನಿಸಿದರು. ಮುಂಚಿನ ವರ್ಷಗಳಲ್ಲಿ ಭಾರತವು, ತಂಡ ಕ್ರೀಡೆಯಾದ ಹಾಕಿ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಸಿದ್ದು ಹೊರತು, ಚಿನ್ನದ ಪದಕ ಎಂಬುದನ್ನು ಕಂಡದ್ದು 2008ರ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಅಭಿನವ್ ಬಿಂದ್ರಾ ಅವರ 10 ಎಂ ರೈಫಲ್ ಇಂದ. ಮುಂದೆ 2021ರಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ತಂದಿದ್ದಾರೆ. ಹೀಗಾಗಿ ವೈಯಕ್ತಿಕ ಸ್ಪರ್ಧಿಯಾಗಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಭಿನವ್ ಬಿಂದ್ರಾ ಚರಿತ್ರಾರ್ಹ ವ್ಯಕ್ತಿಯೇ ಸರಿ.
ಮುಂದೆ ಇಂಗ್ಲೆಂಡ್ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಪದಕ ವಂಚಿತರಾದರೂ, ತಮ್ಮ ಕ್ರೀಡೆಯಲ್ಲಿರುವ ಉತ್ಸುಕತೆಯನ್ನು ಅಭಿನವ್ ದೃಢಪಡಿಸಿದ್ದರು. 2016ರಲ್ಲಿ ರಿಯೊ ಡಿ ಜನೈರೋ ಬೇಸಿಗೆ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದರು.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 3 ಚಿನ್ನ ಹಾಗೂ ಏಷ್ಯನ್ ಕ್ರೀಡಾ ಕೂಟದಲ್ಲಿ ಎರಡು ಕಂಚು ಪದಕಗಳನ್ನು ಸಹಾ ಅವರು ಸಾಧಿಸಿದ್ದಾರೆ.
ಅಭಿನವ್ ಬಿಂದ್ರಾ ತಮ್ಮ 22 ವರ್ಷದ ಕ್ರೀಡಾ ಅವಧಿಯಲ್ಲಿ 150 ಪದಕಗಳನ್ನು ಗಳಿಸಿದ್ದಾರೆ. ಅವರು 2016 ವರ್ಷದಲ್ಲಿ ನಿವೃತ್ತಿ ಘೋಷಿಸಿದರು.
ಅಭಿನವ್ ಬಿಂದ್ರಾ ಅವರಿಗೆ ಪದ್ಮಭೂಷಣ ಗೌರವ ಸಂದಿದೆ. ಇದಲ್ಲದೆ ಅವರಿಗೆ ಐಎಸ್ಎಸ್ಎಫ್'ನ ಪ್ರತಿಷ್ಟಿತ ಬ್ಲೂಕ್ರಾಸ್ ಗೌರವ, 2016 ಒಲಿಂಪಿಕ್ಸ್'ಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ರಾಯಭಾರಿತ್ವ ಮುಂತಾದ ಗೌರವಗಳೂ ಸಂದವು.
ಭಾರತೀಯ ಕ್ರೀಡಾಪಟುಗಳಲ್ಲಿ ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಳಕೆಯ ಮೂಲಕ ಸಾಮರ್ಥ್ಯ ವಿಕಾಸಗೊಳಿಸುವ ಉದ್ದೇಶವುಳ್ಳ ಅಭಿನವ್ ಬಿಂದ್ರಾ ಫೌಂಡೇಷನ್ ಎಂಬ ಲಾಭರಹಿತ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ.
ಭಾರತೀಯ ಮನಗಳಲ್ಲಿ ನಾವೂ ಒಲಿಂಪಿಕ್ಸ್ ಪದಕ ಗೆಲ್ಲಲು ಸಾಧ್ಯ ಎಂಬ ಭರವಸೆ ಮೂಡಿಸಿರುವ ಬಿಂದ್ರಾ ಅವರ ಸಾಧನೆ, ಭಾರತೀಯ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿನ ಫಲಿತಾಂಶಗಳಲ್ಲಿ ಬಹಳಷ್ಟು ಉತ್ತೇಜನಕಾರಿ ಬದಲಾವಣೆ ತಂದಿವೆ ಎಂಬುದು ಗಮನಾರ್ಹವಾಗಿದೆ. ನಮ್ಮ ಚಿನ್ನದ ಹುಡುಗ ಅಭಿನವ್ ಬಿಂದ್ರಾ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.
On the birthday of our country’s first Olympic gold medalist Abhinav Bindra
ಕಾಮೆಂಟ್ಗಳು