ಅಮ್ಜದ್ ಅಲಿ ಖಾನ್
ಅಮ್ಜದ್ ಅಲಿ ಖಾನ್
ಉಸ್ತಾದ್ ಅಮ್ಜದ್ ಅಲಿ ಖಾನ್ ಸರೋದ್ ವಾದನದ ಮಹಾನ್ ಮಾಂತ್ರಿಕರೆನಿಸಿದ್ದಾರೆ. ಅವರ ಸಂಗೀತ ನಿಷ್ಠೆ ಮತ್ತು ತೇಜಸ್ಸುಳ್ಳ ವ್ಯಕ್ತಿತ್ವ ಪ್ರಭಾವಯುತವಾದದ್ದು.
ಅಮ್ಜದ್ ಅಲಿ ಖಾನ್ 1945ರ ಅಕ್ಟೋಬರ್ 9ರಂದು ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ಜನಿಸಿದರು. ತಮ್ಮ ತಂದೆ ಉಸ್ತಾದ್ ಹಫೀಜ್ ಅಲಿ ಖಾನ್ ಅವರಿಂದ ಅಮ್ಜದ್ ಅಲಿ ಖಾನ್ ಸರೋದ್ ವಾದನದ ಶಿಕ್ಷಣವನ್ನು ಪಡೆದರು. ಅಮ್ಜದ್ ಅಲಿ ಖಾನರ ಇಬ್ಬರು ಪುತ್ರರೂ ಸಹಾ ಸರೋದ್ ವಾದನದಲ್ಲಿ ಪರಿಣತಿ ಪಡೆದು ಈ ಶ್ರೇಷ್ಠ ಸಂಗೀತ ಪರಂಪರೆಗೆ ಇರುವ ಸುದೀರ್ಘತೆಯನ್ನು ಮತ್ತಷ್ಟು ವ್ಯಾಪಿಸಿದ್ದಾರೆ. ಅಮ್ಜದ್ ಅಲಿ ಖಾನರು ಸುಬ್ಬುಲಕ್ಷ್ಮಿ ಎಂಬುವರನ್ನು ವಿವಾಹವಾಗಿದ್ದು ತಮ್ಮ ಪತ್ನಿಯ ಹೆಸರಿನಲ್ಲಿ ಒಂದು ರಾಗವನ್ನೂ ಸೃಷ್ಟಿಸಿದ್ದಾರೆ.
ಅಮ್ಜದ್ ಅಲಿ ಖಾನರು ಪ್ರಥಮ ಸರೋದ್ ವಾದನದ ಕಚೇರಿಯನ್ನು ನಡೆಸಿಕೊಟ್ಟಾಗ ಕೇವಲ ಆರು ವರ್ಷದ ಕಿಶೋರ. ತಮ್ಮ ಕುಟುಂಬದ ಭವ್ಯ ಪರಂಪರೆಯನ್ನು ಮುಂದುವರೆಸಿದ 'ಪ್ರಸಿದ್ಧ ಸೇನಿಯಾ-ಬಂಗಾಶ್ ಘರಾಣೆ'ಯ ಏಳನೇಯ ತಲೆಮಾರಿನ 'ಸರೋದ್ ವಾದಕ'ರವರು. ತಮ್ಮ ಶ್ರೋತೃಗಳನ್ನು ತಮ್ಮ ಸಂಗೀತದ ಆತ್ಮದ ಪ್ರೇರಣಾ ಸ್ವರೂಪರೆಂದು ಭಕ್ತಿಯಿಂದ ಭಾವಿಸುವ ಅಮ್ಜದ್ ಅಲಿ ಖಾನರು ಸರೋದ್ ವಾದನದ ವಾಖ್ಯೆಯನ್ನು ಹೊಸ ಹೊಸ ಅರ್ಥಗಳಲ್ಲಿ ವಿಶ್ವದಾದ್ಯಂತ ಮನೋಹರವಾಗಿ ಚೆಲ್ಲಿದವರು.
ಅಮ್ಜದ್ ಅಲಿ ಖಾನರು ನೋಡಲಿಕ್ಕೆ ಎಷ್ಟು ಸುರದ್ರೂಪಿಗಳೋ ಅವರ ಸರೋದ್ ವಾದನದ ಇಂಪು ಕೂಡಾ ಅಷ್ಟೇ ಸೌಂದರ್ಯಯುತವಾದದ್ದು. ಅವರ ಸಂಗೀತದ ಆಶಯಗಳು ಕೂಡಾ ಅಷ್ಟೇ ಔನ್ನತ್ಯದ್ದು. ಹಲವು ವರ್ಷಗಳ ಹಿಂದೆ ಕುನ್ನುಕುಡಿ ವೈದ್ಯನಾಥನ್ ಅವರು ತಿರುವಯ್ಯಾರಿನಲ್ಲಿ ನಡೆಯುವ ತ್ಯಾಗರಾಜ ಆರಾಧನೆಗೆ ಬರುವಂತೆ ಅಮ್ಜದ್ ಅಲಿ ಖಾನರನ್ನು ಆಹ್ವಾನಿಸಿದ್ದರು. ಸಾಮಾನ್ಯವಾಗಿ ದಕ್ಷಿಣಭಾರತೀಯ ಸಂಗೀತಗಾರರು ಭಾಗವಹಿಸಿ ತ್ಯಾಗರಾಜರ ಕೃತಿಗಳನ್ನು ಒಟ್ಟಾಗಿ ಸೇವೆಯಂತೆ ಹಾಡುವ ಈ ಸಂದರ್ಭದಲ್ಲಿ ಅಮ್ಜದ್ ಅಲಿಖಾನರು ತ್ಯಾಗರಾಜರ ಕೃತಿಯನ್ನು ಕಲಿತು ಅಲ್ಲಿನ ಉತ್ಸವದಲ್ಲಿ ಪಾಲ್ಗೊಂಡ ನಿಷ್ಠಾವಂತರು.
ಶಾಸ್ತ್ರೀಯ ಸಂಗೀತಕ್ಕೂ ಜನಪ್ರಿಯ ಸಂಗೀತಕ್ಕೂ ಯಾವುದೇ ಮೂಲಭೂತ ವೆತ್ಯಾಸವಿಲ್ಲ ಎನ್ನುವ ಅಮ್ಜದ್ ಅಲಿ ಖಾನರು ಸಂಗೀತವೆಂದರೆ ಒಂದೇ ಎಂದು ಭಾವಿಸಿದವರು. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಆಲಿಸಲಿಚ್ಚಿಸುವ ಶ್ರೋತೃ ಎಲ್ಲೇ ಇರಲಿ ಆತನನ್ನು ಸಂಗೀತದ ಅಂತರಾತ್ಮದ ಮುಖೇನ ತಲುಪುವುದು ನನ್ನ ಅಂತರಾಳದ ಆಶಯ ಎನ್ನುವ ಅಮ್ಜದ್ ಅಲಿ ಖಾನ್ ವಿಶ್ವದೆಲ್ಲೆಡೆಗಳಲ್ಲಿ ಇರುವ ಸಕಲ ಪ್ರತಿಷ್ಠಿತ ವೇದಿಕೆಗಳಿಂದ ನಿರಂತರವಾಗಿ ಆಹ್ವಾನ ಪಡೆಯುತ್ತಿದ್ದು, ತಮ್ಮ ಸಂಗೀತದ ರಸದೌತಣವನ್ನು ವಿಶ್ವವ್ಯಾಪಿ ಸಂಗೀತ ರಸಿಕರಿಗೆ ಉಣಬಡಿಸುತ್ತಿದ್ದಾರೆ.
ಅಮ್ಜದ್ ಅಲಿಖಾನರಿಗೆ ಪದ್ಮಭೂಷಣ, ಯುನೆಸ್ಕೋ ಪ್ರಶಸ್ತಿ, ಯುನಿಸೆಫ್ ರಾಯಭಾರತ್ವ, ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಪದವಿಗಳು ಹೀಗೆ ವಿಧವಿಧವಾದ ಗೌರವಗಳ ಸುರಿಮಳೆಗಳು ನಿರಂತರವಾಗಿ ವೃಷ್ಟಿಸುತ್ತಿವೆ. ಇವೆಲ್ಲಕ್ಕೂ ಮಿಗಿಲಾಗಿ ಅವರ ಸರೋದ್ ವಾದನದ ಇಂಪು ಹರಡುತ್ತಿದ್ದಂತೆ ಶ್ರೋತೃ ತಾನು ಕರ್ನಾಟಕ ಸಂಗೀತ, ಉತ್ತರ ಭಾರತ ಸಂಗೀತ, ಪಾಶ್ಚಾತ್ಯ ಸಂಗೀತ ಇತ್ಯಾದಿಗಳ ಬಗೆಗಿರುವ ತನ್ನ ಮೋಹದ ಗಡಿಗಳನ್ನು ಮೀರಿ ಸಂಗೀತದ ನಾದದ ಇಂಪಿನಲ್ಲಿ ಕರಗಿಹೋಗುತ್ತಾನೆ.
ಈ ಮಹಾನ್ ಗಾಯಕರ ಸಂಗೀತವು ಸುದೀರ್ಘ ಕಾಲದವರೆಗೆ ನಮ್ಮ ಕಿವಿಗಳಿಗೆ ಇಂಪನ್ನೂ, ಹೃದಯಗಳಿಗೆ ತಂಪನ್ನೂ ನೀಡಿ ನಿರಂತರ ಗಾನಗಂಗೆಯಾಗಿ ಹರಿಯುತ್ತಿರಲಿ ಎಂದು ಆಶಿಸುತ್ತಾ ಅಮ್ಜದ್ ಅಲಿ ಖಾನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಹೇಳೋಣ.
ಅಮ್ಜದ್ ಅಲಿ ಖಾನ್
On the birth lday of Great Musician Sarod Maestro Ustad Amjad Ali Khan

Amjad Ali Khan, Sarod Mastero
ಕಾಮೆಂಟ್‌ಗಳು