ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನಿತಾ ಅನಂತಸ್ವಾಮಿ


ಅನಿತಾ ಅನಂತಸ್ವಾಮಿ
ಇಂದು ಮಹಾನ್ ಮೈಸೂರು ಅನಂತಸ್ವಾಮಿ ಕುಟುಂಬದ ಸುಗಮ ಸಂಗೀತ ಪ್ರತಿಭೆಗಳಲ್ಲಿ ಒಬ್ಬರಾದ ಅನಿತಾ ಅನಂತಸ್ವಾಮಿ ಅವರ ಹುಟ್ಟುಹಬ್ಬ.
ನಾವೆಲ್ಲ ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ, ಸುನೀತಾ ಅನಂತಸ್ವಾಮಿ ಮತ್ತು ಅನಿತಾ ಅನಂತಸ್ವಾಮಿ ಈ ನಾಲ್ವರೂ ಹಾಡನ್ನು ಕೇಳಿದ ಸೌಭಾಗ್ಯವಂತರು. ನಾವು ಕಛೇರಿ ಕೇಳುತ್ತಿದ್ದ ದಿನಗಳಲ್ಲಿ ಕುಟುಂಬದ ಕಿರಿಯರಾದ ಅನಿತಾ ಅವರನ್ನು ಕಂಡಿರಲಿಲ್ಲ.
ಅನಿತಾ ಅವರ ಧ್ವನಿ ನಾವು ಹೆಚ್ಚು ಕೇಳಿದ್ದು ಅಂತರಜಾಲದ ಯೂ ಟ್ಯೂಬ್ ಮತ್ತು ಫೇಸ್ಬುಕ್ ವಲಯಗಳಲ್ಲಿ. ಅಮೆರಿಕದಲ್ಲಿದ್ದು ಅಲ್ಲಿ ಕನ್ನಡ ಸುಗಮ ಸಂಗೀತ ಮತ್ತು ಕನ್ನಡ ಕಸ್ತೂರಿಯ ಪರಿಮಳವನ್ನು ಹರಡಿರುವವರು ಸುನೀತಾ ಅನಂತಸ್ವಾಮಿ ಮತ್ತು ಅನಿತಾ ಅನಂತಸ್ವಾಮಿ ಸಹೋದರಿಯರು. ಅಕ್ಕ ಸಮ್ಮೇಳನಗಳಲ್ಲಿ, ವಿವಿಧ ವೇದಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ, ಶ್ರವ್ಯ ಮಾಧ್ಯಮಗಳಲ್ಲಿ, ಅಂತರಜಾಲದಲ್ಲಿ ಅವರ ಸುಗಮ ಸಂಗೀತವನ್ನು ಮತ್ತು ಆ ಮೂಲಕ ಮೈಸೂರು ಅನಂತಸ್ವಾಮಿಗಳು ಹುಟ್ಟುಹಾಕಿದ ಪರಂಪರೆಯನ್ನು ಕಾಣುವ ಸೌಭಾಗ್ಯ ನಮ್ಮದಾಗಿದೆ. ಇದಕ್ಕೆ ನಾವು ಈ ಸಹೋದರಿಯರಿಗೆ ಋಣಿಗಳು. ಈ ಸಹೋದರಿಯರು ಮುಂದಿನ ತಲೆಮಾರಿಗೆ ಸಹಾ ಮಾರ್ಗದರ್ಶನ ನೀಡುತ್ತಿದ್ದಾರೆ.

ಕನ್ನಡ ಸುಗಮ ಸಂಗೀತದ ಕಲಾವಿದರೂ ಆತ್ಮೀಯರೂ ಆದ ಅನಿತಾ ಅನಂತಸ್ವಾಮಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Anitha Ananthaswamy-Baru

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ