ಚಿಕ್ಕಣ್ಣ
ಚಿಕ್ಕಣ್ಣ
ಚಿಕ್ಕಣ್ಣ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಮಿನುಗುತ್ತಿರುವ ಪ್ರಮುಖ ಹಾಸ್ಯ ಕಲಾವಿದ.
ಚಿಕ್ಕಣ್ಣ ಅವರು ಮೈಸೂರು ಸಮೀಪದ ಬಲ್ಲಹಳ್ಳಿ ಎಂಬಲ್ಲಿ 1984ರ ಜೂನ್ 22ರಂದುಜನಿಸಿದರು.
ಚಿಕ್ಕಣ್ಣ ಮೈಸೂರಿನ ದೃಶ್ಯ ಕಲಾವಿದೆ ತಂಡದಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ಮಾಡುತ್ತಾಬಂದರು. ಮುಂದೆ ಕಿರುತೆರೆಯಲ್ಲಿ ಒಂದು ಕಾಮಿಡಿ ಶೋನಲ್ಲಿ ಕಾರ್ಯನಿರ್ವಹಿಸಿದರು. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮದ ನಿರೂಪಣೆ ಮಾಡುವಾಗ ಅವರು ನಟ'ಯಶ್' ಕಣ್ಣಿಗೆ ಬಿದ್ದರು. ಹೀಗೆ ಯಶ್ ಅವರ 'ಕಿರಾತಕ' ಚಿತ್ರದ ಮೂಲಕ ಚಿತ್ರರಂಗಕ್ಕೆಹಾಸ್ಯನಟರಾಗಿ ಕಾಲಿಟ್ಟರು. ತದನಂತರ ತೆರೆಕಂಡ 'ರಾಜಾ ಹುಲಿ', 'ಅಧ್ಯಕ್ಷ' ಮುಂತಾದ ಚಿತ್ರಗಳುಇವರಿಗೆ ಹೆಸರು ತಂದವು. ಅಲ್ಲಿಂದ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಬಹುತೇಕ ಎಲ್ಲಾ ನಟರೊಂದಿಗೆ ತೆರೆ ಹಂಚಿಕೊಂಡಿರುವ ಚಿಕ್ಕಣ್ಣ ಕಿರುತೆರೆಯಲ್ಲಿ ಖಳನಾಗಿ ಕೂಡಅಭಿನಯಿಸಿದ್ದಾರೆ. ಇನ್ನೇನು ನಾಯಕ ನಟರಾಗಿ ಅಭಿನಯಿಸುತ್ತಾರೆ ಎಂಬ ಸುದ್ಧಿ ಇದೆ.
ಚಿಕ್ಕಣ್ಣ ಮಾಸ್ಟರ್ ಪೀಸ್,ನನ್ನ ನಿನ್ನ ಪ್ರೇಮ ಕಥೆ ಚಿತ್ರಗಳಲ್ಲಿ ಹಿನ್ನಲೆ ಗಾಯಕರೂ ಆಗಿದ್ದಾರೆ. 'ಶಾರ್ಪ್ ಶೂಟರ್' ಚಿತ್ರಕ್ಕೆ ಗೀತೆರಚನೆ ಮಾಡಿದ್ದಾರೆ.
ಉತ್ಸಾಹ, ಪ್ರತಿಭೆ ತುಂಬಿರುವ ಚಿಕ್ಕಣ್ಣ ಅವರಿಗೆ ಒಳಿತಾಗಲಿ.
Tag: Chikkanna
ಕಾಮೆಂಟ್‌ಗಳು