ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೇಬಿ ಶಾಲಿನಿ

 ಬೇಬಿ ಶಾಲಿನಿ


ಬೇಬಿ ಶಾಲಿನಿಯನ್ನ ವಿಷ್ಣುವರ್ಧನ್ ಮತ್ತು ಊರ್ವಶಿ ಜೊತೆ 'ಈ ಜೀವ ನಿನಗಾಗಿ' ಚಿತ್ರದಲ್ಲಿ ನೋಡಿದ್ದು ವಿಶೇಷ ಮರೆಯಲಾಗದ ಅನುಭವ.  ಆ ಮಗುವಿನ ವಿಶಿಷ್ಟ ಕಳೆಯ ಉಪಸ್ಥಿತಿ ಮರೆಯಲಾಗದ್ದು. 

ಮುಂದೆ ವಯಸ್ಕ ಶಾಲಿನಿಯ ಕೆಲವು ಚಿತ್ರಗಳನ್ನ ಟಿವಿಯಲ್ಲಿ ಹಲವು ನೋಡಿದ್ದೇನೆ. 'ಅಲೈಪಾಯುದೆ' ಚಿತ್ರದ ಅದೇ ಸುಶ್ರಾವ್ಯ ಹಾಡಿನಲ್ಲಿನ ಆಕೆಯ ಸುಂದರ ಉಪಸ್ಥಿತಿ ಕೂಡಾ ಮರೆಯಲಾಗದ್ದು.  ಅಜಿತ್ ಅವರನ್ನು ಮದುವೆ ಆಗಿ ಆಕೆ ಸಿನಿಮಾ ನಟನೆ ಕೂಡಾ ಬಿಟ್ಟು ಕೆಲವು ವರ್ಷ ಆಗಿರಬೇಕು. ಈಕೆಯ ತಂಗಿ ಶ್ಯಾಮಿಲಿ ಕೂಡಾ 'ಮತ್ತೆ ಹಾಡಿತು ಕೋಗಿಲೆ'ಯಲ್ಲಿ ವಿಷ್ಣು ಜೊತೆ ಚೆನ್ನಾಗಿ ನಟಿಸಿತ್ತು. 

ಇಂದು ಶಾಲಿನಿ ಹುಟ್ಟು ಹಬ್ಬ ಅಂದಾಗ ಹೀಗೆ ಸುಮಾರು 35 ವರ್ಷದ ಹಿಂದಿನ ನೆನಪಾಯ್ತು. ನೆನಪುಗಳು ಮಧುರ. ಬೇಬಿ ಶಾಲಿನಿ ಕೂಡಾ.

Unforgettable Baby Shalini

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ